ಪುತ್ತೂರು: ಪುತ್ತೂರು ನಗರಸಭೆಯ ಎರಡು ವಾರ್ಡುಗಳಿಗೆ ನಡೆಯುವ ಉಪಚುನಾವಣೆಗೆ ಪುತ್ತಿಲ ಪರಿವಾರದಿಂದ ಎರಡೂ ವಾರ್ಡಿನಲ್ಲಿ ಅಭ್ಯರ್ಥಿಗಳು ಕಣದಲ್ಲಿದ್ದು, ಗುರುವಾರ ನಗರಸಭೆಯಲ್ಲಿ ನಾಮಪತ್ರ ಸಲ್ಲಿಸಿದರು.
ಬೆಳಿಗ್ಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಪುತ್ತೂರು ನಗರಸಭೆಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.
ವಾರ್ಡ್ ನಂ.1ರ ಅಭ್ಯರ್ಥಿಯಾಗಿ ರಕೇಶ್ವರಿ ಅನ್ನಪೂರ್ಣ ರಾವ್ ಹಾಗೂ ವಾರ್ಡು11 ರ ಅಭ್ಯರ್ಥಿಯಾಗಿ ನೆಲ್ಲಿಕಟ್ಟೆ ಚಿಂತನ್ ಅವರು ಉಪಚುನಾವಣೆಗೆ ಪುತ್ತಿಲ ಪರಿವಾರದ ವತಿಯಿಂದ ನಾಮಪತ್ರ ಸಲ್ಲಿಸಿದರು.
ಚುಣಾವಣಾಧಿಕಾರಿ ನಗರ ಸಭೆಯ ಲೋಕೇಶ್ ಅವರಿಗೆ ನಾಮಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಪುತ್ತಿಲ ಪರಿವಾರದ ಪ್ರಸನ್ನ ಮಾರ್ತ, ಉಮೇಶ್ ಕೋಡಿಬೈಲ್, ಪ್ರವೀಣ್ ಶೆಟ್ಟಿ ತಿಂಗಳಾಡಿ, ಅನಿಲ್ ತೆಂಕಿಲ, ಪುತ್ತಿಲ ಪರಿವಾರದ ಸದಸ್ಯರು ಮತ್ತು ಅನೇಕ ಹಿಂದೂಗಳು ಉಪಸ್ಥಿತರಿದ್ದರು.