ಪುತ್ತೂರು: ವ್ಯಕ್ತಿಯೋರ್ವರಿಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆಗೆತ್ನಿಸಿ, ಜೀವ ಬೆದರಿಕೆ ಒಡ್ಡಿದ ಘಟನೆ ಪುತ್ತೂರು ನಗರದ ಕಿಲ್ಲೆ ಮೈದಾನದ ಕ್ಯಾಂಟೀನ್ ಒಂದರಲ್ಲಿ ಗುರುವಾರ ನಡೆದಿದೆ.
ಮಂಜುನಾಥ ಹಾಗೂ ಪ್ರಶಾಂತ ಯಾನೆ ಪಚ್ಚು ಎಂಬವರು ಹಲ್ಲೆಗೆ ಯತ್ನಿಸಿರುವುದಾಗಿ ಆರೋಪಿಸಲಾಗಿದ್ದು, ಆರ್ಯಾಪು ಗ್ರಾಮ ಪುತ್ತೂರು ತಾಲೂಕು ಮೇರ್ಲ ಮನೆ ನಿವಾಸಿ ಪಿ ಕೇಶವ ಸುವರ್ಣ (67) ಎಂಬವರು ಗುರುವಾರ ಮಧ್ಯಾಹ್ನ ಕಿಲ್ಲೆ ಮೈದಾನದ ಬಳಿಯಿರುವ ಕ್ಯಾಂಟೀನ್ ನಲ್ಲಿ ಊಟ ಮಾಡುತ್ತಿದ್ದ ವೇಳೆ ಆರೋಪಿಗಳು ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆಗೆ ಯತ್ನಿಸಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದಾರೆ ಎನ್ನಲಾಗಿದೆ.
ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.