ಪುತ್ತೂರು: ಸಂಪ್ಯ ಸಮೀಪದ ಕಲ್ಲರ್ಪೆ ನಿವಾಸಿ ಶ್ರೀಧರ್ ಆಚಾರ್ಯ ಅವರ ಪುತ್ರ ಭರತ್ ಕಲ್ಲರ್ಪೆ(24) ಮನೆಯ ಸಮೀಪದ ತಮ್ಮ ತೋಟದ ಮರವೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪತ್ರಕರ್ತ ಗಣೇಶ್ ಕಲ್ಲರ್ಪೆ ಅವರ ಸಹೋದರ ಆಗಿರುವ ಭರತ್ ಕಲ್ಲರ್ಪೆ ಹೈದರಾಬಾದ್ ನ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದು ತಿಂಗಳ ಹಿಂದೆಯಷ್ಟೇ ಊರಿಗೆ ಬಂದಿದ್ದರು. ಅಣ್ಣನ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮತ್ತೆ ಹೈದರಾಬಾದ್ ಗೆ ತೆರಳಿದ್ದು, ಡಿ.12ರಂದು ಮತ್ತೆ ಮನೆಗೆ ಬಂದಿದ್ದರು.
ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಇದೀಗ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಪುತ್ತೂರು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ಅವರು ಆಸ್ಪತ್ರೆಗೆ ಭೇಟಿ ನೀಡಿ ಸಂತಾಪ ಸೂಚಿಸಿದರು. ಬಳಿಕ ಅವರ ಸಹಕಾರದೊಂದಿಗೆ ಮರಣೋತ್ತರ ಪರೀಕ್ಷೆ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಯಿತು.