ಗಾಝಾದಲ್ಲಿ ಕದನ ವಿರಾಮ ಪರ ಭಾರತ ಮತ!

ಇಸ್ರೇಲ್-ಹಮಾಸ್ ಸಂಘರ್ಷದಲ್ಲಿ ತಕ್ಷಣದ ಮಾನವೀಯ ಕದನ ವಿರಾಮ ಘೋಷಿಸುವ ಮತ್ತು ಎಲ್ಲಾ ಒತ್ತೆಯಾಳುಗಳನ್ನು ಬೇಷರತ್ತಾಗಿ ಬಿಡುಗಡೆ ಮಾಡುವಂತೆ ಒತ್ತಾಯಿಸುವ ಕರಡು ನಿರ್ಣಯದ ಪರವಾಗಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತ ಮತ ಚಲಾಯಿಸಿದೆ.

193 ಸದಸ್ಯರ ಸಾಮಾನ್ಯ ಸಭೆಯಲ್ಲಿ 153 ದೇಶಗಳು ನಿರ್ಣಯದ ಪರವಾಗಿ ಮತ ಚಲಾಯಿಸಿದರೆ ಕೇವಲ 10 ದೇಶಗಳು ಮಾತ್ರ ವಿರುದ್ಧವಾಗಿ ಮತ ಚಲಾಯಿಸಿದ್ದವು. 23 ದೇಶಗಳು ಮತದಾನದಿಂದ ಹೊರಗುಳಿದವು.

ನಿರ್ಣಯವನ್ನು ವಿರೋಧಿಸಿ ಅಮೆರಿಕ, ಇಸ್ರೇಲ್ ಜೊತೆಗೆ ಆಸ್ಟ್ರಿಯಾ, ಝೆಕ್ಚಿಯಾ, ಗ್ವಾಟೆಮಾಲಾ, ಲೈಬೀರಿಯಾ, ಮೈಕ್ರೋನ್ಸಿಯಾ, ನೌರು, ಪಪೂವಾ ನ್ಯೂ ಗ್ಯುನಿಯಾ ಮತ್ತು ಪೆರುಗ್ವೆ ಮತ ಚಲಾಯಿಸಿದವು.



































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top