ಇದುವರೆಗೆ ಒಬ್ಬರು ಸಂಸದರ ಹೆಸರಿನಲ್ಲಿ ಇಬ್ಬರು ವೀಕ್ಷಕರು ತೆರಳಲು ಅವಕಾಶ ಇತ್ತು. ಆದರೆ ಇನ್ನು ಮುಂದೆ ಸಂಸತ್’ಗೆ ತೆರಳಲು ವೀಕ್ಷಕರ ಪಾಸ್ ಅನ್ನು ಬ್ಯಾನ್ ಮಾಡಲಾಗಿದೆ.
ಈ ಬಗ್ಗೆ ಆದೇಶ ಹೊರಡಿಸಿರುವ ಸ್ಪೀಕರ್, ಇನ್ನು ಮುಂದೆ ಸಂಸತ್’ಗೆ ವೀಕ್ಷಕರ ಪಾಸ್ ಸಿಗಲ್ಲ ಎಂದು ತಿಳಿಸಿದ್ದಾರೆ.
ಸಂಸತ್ತಿಗೆ ದಾಳಿ ನಡೆದು 22ನೇ ವರ್ಷದ ದಿನವಾದ ಬುಧವಾರ ಮತ್ತೆ ಸಂಸತ್ತಿಗೆ ದಾಳಿ ನಡೆಸುವ ಪ್ರಯತ್ನ ನಡೆದಿದೆ. ದುಷ್ಕರ್ಮಿಗಳು ಸಂಸತ್ತಿಗೆ ನುಗ್ಗಿ ಕೆಮಿಕಲ್ ಸ್ಪ್ರೇ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಪೀಕರ್ ಆದೇಶ ಹೊರಡಿಸಿದ್ದಾರೆ. ಘಟನೆಗೆ ಸಂಬಂಧಪಟ್ಟಂತೆ ಒಟ್ಟು ನಾಲ್ವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.
























