ಮದುವೆಯ ಪರಿಕಲ್ಪನೆಯನ್ನೇ ಬದಲಿಸುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಚರ್ಚೆಗೆ ಒಳಗಾಗುತ್ತಿದೆ.
ವರನೊಬ್ಬ ಒಂದೇ ಬಾರಿಗೆ ನಾಲ್ಕು ಯುವತಿಯರನ್ನು ಮದುವೆಯಾಗಿರುವ ವಿಡಿಯೋ ವೈರಲ್ ಆಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ವರನು ಬಿಳಿ ಬಟ್ಟೆ ಮತ್ತು ಪೇಟವನ್ನು ಧರಿಸಿ ವೀಡಿಯೊದಲ್ಲಿ ಕಾಣಿಸಿಕೊಂಡಿದ್ದಾನೆ. ಅಲ್ಲದೇ ಸುಂದರವಾಗಿರುವ ನಾಲ್ವರು ಯುವತಿಯರನ್ನು (ವಧು) ಅಗ್ನಿಸಾಕ್ಷಿಯಾಗಿ ಮದುವೆಯಾಗುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.
ಹೋಮಕುಂಡಕ್ಕೆ ಪ್ರದಕ್ಷಿಣೆ ಹಾಕಿದ ನಂತರ, ಈ ಹುಡುಗಿಯರು ತಮ್ಮ ಪತಿಯ ಪಾದಗಳಿಗೆ ನಮಸ್ಕರಿಸುವ ದೃಶ್ಯವೂ ವಿಡಿಯೋದಲ್ಲಿ ಸೆರೆಯಾಗಿದೆ. ಈ ಆಧುನಿಕ ಜಗತ್ತಿನಲ್ಲಿ ಅನೇಕರು ರೀಲ್ಸ್ಗಾಗಿ ಏನೇನೋ ಮಾಡುತ್ತಾರೆ. ಆದರೆ ಈ ವಿಡಿಯೋದಲ್ಲಿರುವುದು ಕೂಡ ರೀಲ್ಸೋ ಅಥವಾ ನಿಜವಾದ ಮದುವೆಯೋ ಅನ್ನೋದು ಮಾತ್ರ ಇನ್ನೂ ತಿಳಿದು ಬಂದಿಲ್ಲ.
ವರನೊಬ್ಬ ನಾಲ್ವರು ವಧುಗಳನ್ನು ಮದುವೆಯಾಗುತ್ತಿರುವ ವಿಡಿಯೋ ವೈರಲ್ ಆದ ಬೆನ್ನಲ್ಲೇ ನೂರಾರು ಜನರು ಆ ವಿಡಿಯೋಗೆ ವಿಭಿನ್ನ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು, ‘ಇದು ಬಹುಶಃ ಸುಳ್ಳು ಸುದ್ದಿಯಾಗಿರಬಹುದು. ಇದು ರೀಲ್ಗಳಲ್ಲಿ ಮಾತ್ರ ನಡೆಯುತ್ತದೆ’ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ‘ವರ ತಪ್ಪು ದಾರಿಗೆ ತಿರುಗುತ್ತಿದ್ದಾನೆ’ ಎಂದು ಕಾಮೆಂಟ್ ಮಾಡಿದ್ದಾರೆ. ಪ್ರೀತಿಯ ಗೀಳಿನಲ್ಲಿ ಅವನು ಯಾವ ದಿಕ್ಕಿಗೆ ನಡೆಯಬೇಕೆಂದು ಮರೆತು ಬಿಡುತ್ತಾನೆ’ ಎಂದು ಇನ್ನೊಬ್ಬರು ಕಾಮೆಂಟ್ ಮೂಲಕ ಹೇಳಿದ್ದಾರೆ.
ನೂರಾರು ಮಂದಿ ವಿಡಿಯೋವನ್ನು ಲೈಕ್ ಮಾಡಿದ್ದಾರೆ. ಈ ವಿಡಿಯೋವನ್ನು ಸಾವಿರಾರು ಮಂದಿ ವೀಕ್ಷಣೆ ಮಾಡಿದ್ದಾರೆ. ಆದರೆ ಈ ವಿಡಿಯೋದ ಸತ್ಯಾಸತ್ಯತೆ ಬಗ್ಗೆ ಇನ್ನೂ ತಿಳಿದು ಬಂದಿಲ್ಲ.