ಪುತ್ತೂರು: ಹೊಟೇಲ್ ರಾಮಣ್ಣ ಎಂದೇ ಚಿರಪರಿಚಿತರಾಗಿದ್ದ ಕುಂಬ್ರದ ಹಿರಿಯ ಹೊಟೇಲ್ ಉದ್ಯಮಿ ರಾಮಣ್ಣ ರೈ ಕುಂಬ್ರ (78) ರವರು ಅಲ್ಪ ಕಾಲದ ಅಸೌಖ್ಯದಿಂದ ಶನಿವಾರ ಕುಂಬ್ರದ ಸ್ವಗೃಹದಲ್ಲಿ ನಿಧನರಾದರು.
ಕುಂಬ್ರದಲ್ಲಿ ಅನೇಕ ವರ್ಷಗಳಿಂದ ಹೊಟೇಲ್ ಉದ್ಯಮ ನಡೆಸಿಕೊಂಡು ಬರುತ್ತಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
























