ಮಾಸ್ಟರ್ ಶೆಫ್ ಇಂಡಿಯಾ ಪ್ರಶಸ್ತಿ ಪಡೆದ ಮಂಗಳೂರಿನ ಮುಹಮ್ಮದ್ ಆಶಿಕ್

ಸೋನಿ ಲೈವ್ ಒಟಿಟಿ ವೇದಿಕೆ ಮುಂಬಯಿಯಲ್ಲಿ ಆಯೋಜಿಸಿದ ಮಾಸ್ಟರ್ ಶೆಫ್ ಇಂಡಿಯಾ ಸ್ಪರ್ಧೆಯ ಫೈನಲ್ ನಲ್ಲಿ ಮಂಗಳೂರಿನ ಯುವಕ ಮುಹಮ್ಮದ್ ಆಶಿಕ್ ಅವರು ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ.

ಈ ಸ್ಪರ್ಧೆಯಲ್ಲಿ ಅಂತಿಮ ಸುತ್ತು ತಲುಪಿದ ರುಖ್ಸಾರ್ ಸಯೀದ್, ಸೂರಜ್ ಥಾಪಾ, ನಂಬಿ ಜೆಸ್ಸಿಕಾ ಮರಕ್ ಸೇರಿದಂತೆ ನಾಲ್ವರಲ್ಲಿ ಮುಹಮ್ಮದ್ ಆಶಿಕ್ ಒಬ್ಬರಾಗಿದ್ದರು. ಶುಕ್ರವಾರ ಸ್ಪರ್ಧೆಯ ಫೈನಲ್ ಸಂಚಿಕೆ ವಿಜೇತರಾಗಿ ಹೊರ ಹೊಮ್ಮಿದ್ದಾರೆ. ಅಲ್ಲದೆ ಈ ಸ್ಪರ್ಧೆಯನ್ನು ಗೆದ್ದ ದಕ್ಷಿಣ ಭಾರತದ ಪ್ರಥಮ ಸ್ಪರ್ಧಿ ಎಂಬ ಹೆಗ್ಗಳಿಯನ್ನು ಅವರು ಪಡೆದಿದ್ದಾರೆ.

ಆಶಿಕ್ ಅವರು ಮಂಗಳೂರಿನ ಜೆಪ್ಪು ಮಹಾಕಾಳಿಪಡ್ಪುವಿನ ಅಬ್ದುಲ್ ಖಾದರ್ – ಸಾರಮ್ಮ ದಂಪತಿ ಪುತ್ರ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top