ಪುತ್ತೂರು: ಕೊಳ್ತಿಗೆ ಹಾಲುತ್ಪಾದಕರ ಸಹಕಾರ ಸಂಘದ ಮುಂದಿನ 5 ವರ್ಷಗಳ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಸಹಕಾರಿ ಭಾರತಿ ಬೆಂಬಲಿತ ಎಲ್ಲಾ 11 ಮಂದಿ ಜಯಗಳಿಸಿದ್ದಾರೆ.
ಶನಿವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಸಾಮಾನ್ಯ ಕ್ಷೇತ್ರದಿಂದ ಸಹಕಾರಿ ಭಾರತಿ ಬೆಂಬಲಿತರಾದ ಕರುಣಾಕರ, ಕೆ.ಬೆಳ್ಯಪ್ಪ ಗೌಡ, ಎನ್.ಮುರಳೀಕೃಷ್ಣ, ವಾಡ್ಯಪ್ಪ ಗೌಡ, ವಿಶ್ವನಾಥ ಶೆಟ್ಟಿ, ಶಿವರಾಮ ಕೆ., ಸಿ.ಆರ್.ಸುಬ್ರಹ್ಮಣ್ಯ ಗೌಡ, ಮಹಿಳಾ ಮೀಸಲು ಸ್ಥಾನದಿಂದ ಚಂದ್ರಾವತಿ, ಜಲಜಾಕ್ಷಿ, ಹಿಂದುಳಿದ ವರ್ಗ ಬಿ ಸ್ಥಾನದಿಂದ ಕೆ.ತಿರುಮಲೇಶ್ವರ, ಹಿಂದುಳಿದ ವರ್ಗ ಎ ಸ್ಥಾನದಿಂದ ಧನಂಜಯ ಪೂಜಾರಿ ಜಯಗಳಿಸಿದ್ದಾರೆ.
ಪ.ಪಂ. ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಗಣಪಯ್ಯ ನಾಯ್ಕ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಆ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದರು.
ಚುನಾವಣೆ ಪ್ರಕ್ರಿಯೆ ಸಂದರ್ಭ ಬಿಜೆಪಿ ಶಕ್ತಿ ಕೇಂದ್ರ ಸಂಚಾಲಕ ಸತೀಶ್ ಪಾಂಬಾರು ಸಹಿತ ಮತ್ತಿತರರು ಉಪಸ್ಥಿತರಿದ್ದರು.