‘ಮೂರು ಮುತ್ತು’ ನಾಟಕ ಖ್ಯಾತಿಯ ಅಶೋಕ್ ಶಾನುಭಾಗ್ ನಿಧನ!

ರೂಪಕಲಾ ನಾಟಕ ತಂಡದ ಮೂರು ಮುತ್ತು ಖ್ಯಾತಿಯ ಅಶೋಕ್ ಶಾನುಭಾಗ್ ಅವರು ಅನಾರೋಗ್ಯದಿಂದ ಶುಕ್ರವಾರ ರಾತ್ರಿ ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.

ಇವರು `ಮೂರು ಮುತ್ತು’, `ಅವನಲ್ಲ ಇವನು’, `ಪಾಪ ಪಾಂಡು’, `ಅಳುವುದೋ ನಗುವುದೋ’, `ರಾಮ ಕೃಷ್ಣ ಗೋವಿಂದ’ ಸೇರಿದಂತೆ ಇನ್ನು ಹಲವಾರು ನಾಟಕಗಳಲ್ಲಿ ಹಾಸ್ಯ ಪಾತ್ರದಿಂದ ಮಿಂಚಿದ್ದರು.

ಕೆಲ ಸಮಯದಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಹೇಳಲಾಗಿದೆ. ಮೃತರ ಅಂತ್ಯ ಸಂಸ್ಕಾರ ಶನಿವಾರ ಕುಂದಾಪುರದಲ್ಲಿ ನಡೆಯಲಿದೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top