ಎದೆಯ ಭಾಗದಿಂದಲೇ ಹರಿದ ಬಸ್!! | ಸ್ಥಳದಲ್ಲೇ ಕೊನೆಯುಸಿರೆಳೆದ ಕುಂಞಿರಾಮ ಮಣಿಯಾಣಿ!

ಪುತ್ತೂರು: ಖಾಸಗಿ ಬಸ್ಸಿನ ಅಡಿಗೆ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಗಾಳಿಮುಖದಲ್ಲಿ ನಡೆದಿದ್ದು, ಮೃತಪಟ್ಟವರನ್ನು ಕುಂಞಿರಾಮ ಮಣಿಯಾಣಿ ಎಂದು ಗುರುತಿಸಲಾಗಿದೆ.

ಕೃಷಿಕರಾಗಿದ್ದ ಕುಂಞಿರಾಮ ಮಣಿಯಾಣಿ ಅವರು ಮುಳ್ಳೇರಿಯಾದ ಕೋಳಿಕಾಲ ನಿವಾಸಿ. ಗಾಳಿಮುಖಕ್ಕೆ ಬಂದಿದ್ದ ಅವರು, ಬಸ್ಸಿನಿಂದ ಇಳಿದು ರಸ್ತೆ ದಾಟಬೇಕು ಎನ್ನುವಷ್ಟರಲ್ಲಿ ದುರ್ಘಟನೆ ನಡೆದಿದೆ.

ಹಿಂಬದಿ ಬಾಗಿಲಿನಿಂದ ಇಳಿದಿದ್ದ ಕುಂಞಿರಾಮ ಮಣಿಯಾಣಿ ಅವರು, ಇನ್ನೊಂದು ಬದಿಗೆ ದಾಟುವವರಿದ್ದರು. ಅಷ್ಟರಲ್ಲಿ ಬಸ್ ಚಲಿಸಿದ್ದು, ಬಸ್ಸಿನ ಮುಂಭಾಗದ ಚಕ್ರ ಕುಂಞಿರಾಮ ಅವರ ಎದೆಯ ಭಾಗದಿಂದ ಬಸ್ ಹರಿದಿದೆ. ತಾನು ಬಂದಿದ್ದ ಬಸ್ಸಿನ ಅಡಿಗೆ ಬಿದ್ದು ಕೊನೆಯುಸಿರೆಳೆದಿರುವುದು ದುರಂತ.



































 
 

ಮೃತರು ಪತ್ನಿ ನಾರಾಯಣಿ, ಪುತ್ರರಾದ ಮಣಿ, ಸಂತೋಷ್, ಪುತ್ರಿಯರಾದ ಶ್ಯಾಮಲಾ, ಸಾವಿತ್ರಿ ಅವರನ್ನು ಅಗಲಿದ್ದಾರೆ. ಸಂಪ್ಯ ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಮೃತದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top