ಕುಕ್ಕೆ ಶ್ರೀ ಸುಬ್ರಹ್ಮಣ್ಯ ಚಂಪಾಷಷ್ಠಿ ಜಾತ್ರೋತ್ಸವಕ್ಕೆ ಭರದ ಸಿದ್ಧತೆ | ಲಕ್ಷ ದೀಪೋತ್ಸವದಂದು ಲಕ್ಷ ಹಣತೆಗಳ ಸಾಲು. 


ಸುಬ್ರಹ್ಮಣ್ಯ,: ಕುಕ್ಕೆಶ್ರೀ ಸುಬ್ರಹ್ಮಣ್ಯದಲ್ಲಿ ವಾರ್ಷಿಕ ಚಂಪಾ ಷಷ್ಟಿ ಮಹೋತ್ಸವದ ಅಂಗವಾಗಿ ಡಿ.9 ಶನಿವಾರ ಮೂಲಮೃತಿಕ ಪ್ರಸಾದ ತೆಗೆದು ವಿತರಣೆ ಆಗುವುದರೊಂದಿಗೆ  ಆರಂಭಗೊಳ್ಳಲಿದ್ದು, ಡಿ.24 ರಂದು ಕೊಪ್ಪರಿಗೆ ಇಳಿಯುವ ಮೂಲಕ ರಾತ್ರಿ ನೀರು ಬಂಡಿ ಉತ್ಸವ ಹಾಗೂ ದೈವಗಳ ನಡಾವಳಿ ನಡೆದು ಜಾತ್ರೆ ಸಂಪನ್ನಗೊಳ್ಳಲಿದೆ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ ತಿಳಿಸಿದ್ದಾರೆ.

ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿ ಜಾತ್ರೋತ್ಸವಕ್ಕೆ ಹೊರೆ ಕಾಣಿಕೆಸಲ್ಲಿಸುವ ಬಗ್ಗೆ ಸುಳ್ಯ, ಪುತ್ತೂರು ಹಾಗೂ ಕಡಬ ತಾಲೂಕಿನ ಹೆಚ್ಚಿನ ದೇವಸ್ಥಾನಗಳಿಗೆ ಸುತ್ತೋಲೆ ಕಳಿಸಿದ್ದೇವೆ. ಹೊರೆ ಕಾಣಿಕೆ ತರುವ ದಿನ ಕೂಡ ನಿಗದಿಪಡಿಸಲಾಗಿದೆ. ಅಲ್ಲದೆ ಸ್ಥಳೀಯ ಸಾರ್ವಜನಿಕರಿಗೆ ಕೂಡ ಹೊರೆ ಕಾಣಿಕೆ ಸಮರ್ಪಿಸಲು ಅವಕಾಶ ನೀಡಲಾಗುವುದು ಎಂದು ತಿಳಿಸಿದರು.

ಈ ಬಾರಿ ಜಾತ್ರೆಯೋತ್ಸವದಲ್ಲಿ ಸೇವೆ ಸಲ್ಲಿಸಲು ಸ್ಥಳೀಯ ಶಾಲಾ ಕಾಲೇಜುಗಳಲ್ಲದೆ 1035 ಸ್ವಯಂ ಸೇವಕರ ಅರ್ಜಿ ಕೂಡ ಬಂದಿರುತ್ತದೆ. ಎಲ್ಲೆಲ್ಲಿ ಸ್ವಯಂಸೇವಕರನ್ನು ನಿಯೋಜನೆ ಮಾಡಬೇಕೆಂದು ಪರಿಶೀಲಿಸಿ ಅವಕಾಶವನ್ನು ನೀಡಲಾಗುವುದು. ಈ ಬಾರಿ ಹಸಿರು ಪಟಾಕಿ ಸಿಡಿಮದ್ದನ್ನೇ ಬಳಸಬೇಕೆಂದು ಜಿಲ್ಲಾಧಿಕಾರಿಯವರು ಈ ಬಗ್ಗೆ ಈ ಹಿಂದೆ ಸೂಚನೆ ನೀಡಿದ್ದಾರೆ. ಅದೇ ರೀತಿ ಈಗಾಗಲೇ ಟೆಂಡರ್ ಕೂಡ ಕರೆಯಲಾಗಿದೆ ಎಂದ ಅವರು, ಈ ಬಾರಿ ಲಕ್ಷ ದೀಪೋತ್ಸವದಂದು ಒಂದು ಲಕ್ಷ ಹಣತೆಗಳನ್ನು ಉರಿಸುವ ಬಗ್ಗೆ ಸಿದ್ಧತೆಗಳು ನಡೀತಾ ಇದೆ. ಅಲ್ಲದೆ ಆ ದಿನ ಕುಣಿತ ಭಜನೆ ಕೂಡ ನಡೆಯುತ್ತದೆ. ಈಗಾಗಲೇ 139 ತಂಡಗಳು ತಮ್ಮ ಹೆಸರನ್ನು ನೋಂದಾಯಿಸ್ತಿರುತ್ತವೆ. ನಮ್ಮ ಯೋಜನೆ ಸುಮಾರು 200 ತಂಡಗಳು ಬರಬಹುದೆಂದು . ಎಲ್ಲಾ ತಂಡಗಳಿಗೂ ಅವಕಾಶ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದರು.



































 
 

ವಾಹನ ಪಾರ್ಕಿಂಗ್ ಬಗ್ಗೆ ವ್ಯವಸ್ಥಿತವಾಗಿ ಮಾಡಬೇಕೆಂದು ನಮ್ಮ ಆಲೋಚನೆ. ಈ ಬಗ್ಗೆ ಈಗಾಗಲೇ ಸ್ಥಳೀಯ ಪೊಲೀಸ್ ಠಾಣೆಯ ಉಪನಿರೀಕ್ಷಕರನ್ನು ಕೂಡ ಮಾತನಾಡಿಸಿದ್ದೇವೆ. ಎಲ್ಲೆಲ್ಲಿ ಘನ ವಾಹನಗಳು ಲಘುವಾನಗಳು ದ್ವಿಚಕ್ರ ವಾಹನಗಳನ್ನು ಪಾರ್ಕಿಂಗ್ ಮಾಡಬೇಕೆಂದು ಅವರು ನಿರ್ಧರಿಸಿ ಕ್ರಮ ಕೈಗೊಳ್ಳಲಿರುವರು. ಅಲ್ಲದೆ ಅಲ್ಲಲ್ಲಿ ಫ್ಲೆಕ್ಸ್‍ ಗಳನ್ನು ಹಾಕಿ ಮಾಹಿತಿಗಳನ್ನ ನೀಡುವ ಕುರಿತು ಕ್ರಮ ವಹಿಸಲಾಗುವುದು. ಪಂಚಮಿ ದಿನದಂದು ನಾಲ್ಕು ಚಕ್ರದ ವಾಹನಗಳು ಕುಮಾರದಾರ ದ್ವಾರದಿಂದ ಮುಂದೆ ಬರಬೇಕಾದರೆ ಪಾಸುಗಳನ್ನು ತೋರಿಸಬೇಕಾಗುತ್ತದೆ. ಭಕ್ತಾದಿಗಳಿಗೆ ಶೌಚಾಲಯ ವ್ಯವಸ್ಥೆ ಹಾಗೂ ಆರೋಗ್ಯ ಚಿಕಿತ್ಸಾ ವ್ಯವಸ್ಥೆ ಸೇವೆಯನ್ನು 24 ಗಂಟೆಯೂ ನೀಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವ್ಯವಸ್ಥಾಪನ ಸಮಿತಿ ಸದಸ್ಯರುಗಳಾದ ಪ್ರಸನ್ನ ದರ್ಬೆ, ವನಜ ವಿ ಭಟ್, ಶೋಭಾ ಗಿರಿಧರ್ ಹಾಗೂ ಲೋಕೇಶ್ ಮುಂಡೋಕಜೆ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top