ಪುತ್ತೂರು: ಶಾಲಾ ಬಸ್ ಹಾಗೂ ಕಾರು ನಡುವೆ ಢಿಕ್ಕಿ ಸಂಭವಿಸಿದೆ ಘಟನೆ ಸವಣೂರು ಸಮೀಪದ ಚಾಪಲದಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ.
ಖಾಸಾಗಿ ವಿದ್ಯಾಸಂಸ್ಥೆಯೊಂದರ ಬಸ್ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಶಾಲಾ ಬಸ್’ಗೆ ಸಣ್ಣ ಪುಟ್ಟ ಹಾನಿಯಾಗಿದ್ದು, ಕಾರಿನ ಮುಂಭಾಗ ಜಖಂಗೊಂಡಿದೆ.

ಅಪಘಾತದಿಂದ ಎರಡೂ ಬದಿಯೂ ಟ್ರಾಫಿಕ್ ಜಾಮ್ ಉಂಟಾಯಿತು. ಬೆಳಿಗ್ಗಿನ ಹೊತ್ತಾಗಿದ್ದರಿಂದ ವಾಹನಗಳ ಸರತಿ ಸಾಲು ದೊಡ್ಡದಾಗಿಯೇ ಬೆಳೆದಿತ್ತು.