ಸುಬ್ರಹ್ಮಣ್ಯ: ಕುಕ್ಕೆ ಫ್ರೆಂಡ್ಸ್ ಹಾಗೂ ಕಡಬ ತಾಲೂಕು ವಾಲಿಬಾಲ್ ಅಸೋಸಿಯೇಷನ್ ಜಂಟಿ ಆಶ್ರಯದಲ್ಲಿ ಆಹ್ವಾನಿತ ಆರು ತಂಡಗಳ ಲೀಗ್ ಮಾದರಿಯ ಹೊನ್ನಲು ಬೆಳಕಿನ ಪುರುಷರ ವಾಲಿಬಾಲ್ ಪಂದ್ಯಾಟ ಕಾಶಿ ಕಟ್ಟೆ ಬಳಿಯ ಕ್ರೀಡಾಂಗಣದಲ್ಲಿ ನಡೆಯಿತು.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಶ್ರೀವತ್ಸ ದೀಪ ಬೆಳಗಿ ಉದ್ಘಾಟಿಸಿ, ಗ್ರಾಮೀಣ ಪ್ರದೇಶವಾದ ಸುಬ್ರಹ್ಮಣ್ಯದಲ್ಲಿ ಯುವಕರು ಸಂಘಟಿಸಿ ನಡೆಸಿದ ಈ ವಾಲಿಬಾಲ್ ಪಂದ್ಯಾಟ ಯಶಸ್ವಿಯಾಗಿ ನೆರವೇರಲಿ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿ ಕಡಬ ತಾಲೂಕು ವಾಲಿಬಾಲ್ ಅಸೋಸಿಯೇಶನ್ ಅಧ್ಯಕ್ಷ ಲಕ್ಷ್ಮೀ ನಾರಾಯಣ ರಾವ್ ರಾಮಕುಂಜ ಮಾತನಾಡಿ, ಗ್ರಾಮೀಣ ಕ್ರೀಡೆ ಅದರಲ್ಲೂ ಗ್ರಾಮೀಣ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶವನ್ನು ನೀಡುವಂತಹ ವಾಲಿಬಾಲ್ ಪಂದ್ಯಾಟ ಇಲ್ಲಿಯ ಯುವಕರ ಸಂಘಟಿತ ಪ್ರಯತ್ನ ಎಂದರು.
ಸುಬ್ರಹ್ಮಣ್ಯ ಕುಕ್ಕೆ ಶ್ರೀ ಫ್ರೆಂಡ್ಸ್ ಅಧ್ಯಕ್ಷ ಭವಿಷ್ಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಚ್.ಎಲ್. ವೆಂಕಟೇಶ್, ನಿಕಟ ಪೂರ್ವ ಸದಸ್ಯ ಅಶೋಕ್ ನೇಕ್ರಾಜೆ, ಉದ್ಯಮಿ, ಗ್ರಾಮ ಪಂಚಾಯಿತಿ ಸದಸ್ಯ ಹರೀಶ್ ಹಿಂಜಾಡಿ, ಸಮಾಜ ಸೇವಕ ಡಾl ರವಿ ಕಕ್ಕೆ ಪದವು, ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಮಾಧವ ಎಂ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಗುಡ್ಡಗಾಡು ಓಟದಲ್ಲಿ ಎರಡನೇ ಬಾರಿಗೆ ರಾಜ್ಯಮಟ್ಟಕ್ಕೆ ಆಯ್ಕೆಯಾದ ಎಸ್ ಎಸ್ ಪಿ ಯು ಸಿ ಕಾಲೇಜಿನ ವಿದ್ಯಾರ್ಥಿನಿ ಶ್ರದ್ಧಾ ಅವರನ್ನು ಸನ್ಮಾನಿಸಲಾಯಿತು.
ಪಂದ್ಯಾಟದಲ್ಲಿ ಉಮೇಶ ಕೆ,ಎನ್. ಮಾಲಕತ್ವದ ಪ್ರಶಾಂತ ಸ್ಪೋರ್ಟ್ಸ್ ಕ್ಲಬ್, ಸುಬ್ರಹ್ಮಣ್ಯ ಜೀವನ್ ಮಾಲಕತ್ವದ ತತ್ವಿಕ ಫ್ರೆಂಡ್ಸ್, ಸುಬ್ರಹ್ಮಣ್ಯ, ಆಕಾಶ್ ಮಾಲಕತ್ವದ ಬೆಳ್ಳಿ ಫ್ರೆಂಡ್ಸ್, ವಿಜಯಕುಮಾರ್ ಸೊರಕೆ ಮಾಲಕತ್ವದ ಮಂಗಳ ಬಾರ್ ಅಂಡ್ ರೆಸ್ಟೋರೆಂಟ್, ಯೋಗೀಶ್ ಮಾಲಕತ್ವದ ಪ್ರಕೃತಿ ವಾರಿಯರ್ಸ್ ಹರಿಹರ ಪಳ್ಳತಡ್ಕ ಹಾಗೂ ಉದಯ ಶಂಕರ ಭಟ್ ಮಾಲಕತ್ತದ ಶ್ರೀ ರಕ್ಷಾಸುಬ್ರಹ್ಮಣ್ಯ ತಂಡಗಳು ಭಾಗವಹಿಸಿದ್ದವು.
ಕುಕ್ಕೆ ಫ್ರೆಂಡ್ಸ್ ಕಾರ್ಯದರ್ಶಿ ರಶಿನ್ ಸುಬ್ರಮಣ್ಯ ಸ್ವಾಗತಿಸಿದರು. ವಿಶ್ರಾಂತ ಉಪನ್ಯಾಸಕ ವಿಶ್ವನಾಥ ನಡುತೋಟ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.