ಮಿಝೋರಾಂ: ಸೋಲು ಕಂಡ ಮುಖ್ಯಮಂತ್ರಿ, ಬಹುಮತ ಗೆದ್ದ ಝಡ್.ಪಿ.ಎಂ.

ಮಿಝೋರಾಂ: ಮಿಝೋರಾಂನಲ್ಲಿ ZPM ಪಕ್ಷ ನೂತನ ಸರ್ಕಾರವನ್ನು ರಚಿಸಲು ಸಿದ್ಧವಾಗಿದೆ. ZPM ಪಕ್ಷವು 40 ಸ್ಥಾನಗಳಲ್ಲಿ 22 ಸ್ಥಾನಗಳನ್ನು ಗೆದ್ದಿದೆ ಎಂದು ಭಾರತೀಯ ಚುನಾವಣಾ ಆಯೋಗವು ತಿಳಿಸಿದೆ. ಇನ್ನೂ ಐದು ಸ್ಥಾನಗಳಲ್ಲಿ ZPM ಮುನ್ನಡೆಯನ್ನು ಸಾಧಿಸಿದೆ.

ಅಲ್ಲದೆ, ಪೂರ್ವ ಐಜ್ವಾಲ್ ನಲ್ಲಿ ಪ್ರತಿಸ್ಪರ್ಧಿ ZPM ಅಭ್ಯರ್ಥಿ ಎದುರು ಮಿಝೋರಾಂ ಮುಖ್ಯಮಂತ್ರಿ ಸೋತಿದ್ದು, ZPM ಗೆ ಭಾರೀ ಮೈಲಿಗಲ್ಲನ್ನು ಸೃಷ್ಟಿಸಿದೆ. ಮುಖ್ಯಮಂತ್ರಿ ಝೊರಾಂಥಾಂಗ ವಿರುದ್ಧ ZPM ಅಭ್ಯರ್ಥಿ ಲಾಲತನಸಂಗ 2,101 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ZPMನ ಮುಖ್ಯಮಂತ್ರಿ ಅಭ್ಯರ್ಥಿ ಲಾಲ್ದುಹೋಮ ಅವರು ಸರ್ಚಿಪ್‌ನಲ್ಲಿ MNF ಅಭ್ಯರ್ಥಿಯನ್ನು 2,982 ಮತಗಳ ಅಂತರದಿಂದ ಸೋಲಿಸಿದ್ದಾರೆ. ಆಡಳಿತಾರೂಢ ಎಂಎನ್‌ಎಫ್ ಏಳು ಸ್ಥಾನಗಳನ್ನು ಗೆದ್ದಿದ್ದು, ಪ್ರಸ್ತುತ ಐದು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿ ಎರಡು ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಒಂದು ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ.



































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top