ಪುತ್ತೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಂಪು ಕಲ್ಲು ಸಾಗಾಟವನ್ನು ಡಿ. 5ರಿಂದ ಅನಿರ್ದಿಷ್ಟಾವಧಿಗಳ ಕಾಲ ಬಂದ್’ಗೆ ಕರೆ ನೀಡಲಾಗಿದೆ.
ಕಡಬ ಹಾಗೂ ಪುತ್ತೂರು ತಾಲೂಕಿನಲ್ಲಿ ಡಿ. 5ರಿಂದ 12ರವರೆಗೆ ಅನಿರ್ಧಿಷ್ಟಾವಧಿ ಬಂದ್ ನಡೆಯಲಿದೆ.
ಲಾರಿ ಬಿಡಿ ಭಾಗಗಳಿಗೆ ಮತ್ತು ಡಿಸೇಲ್ ಬೆಲೆ ಏರಿಕೆ ಆಗುತ್ತಿರುವುದನ್ನು ವಿರೋಧಿಸಿ, ಕೆಂಪು ಕಲ್ಲು ಸಾಗಾಟದಲ್ಲಿ ಬ್ರೋಕರ್’ಗಳ ಹಾವಳಿಯನ್ನು ವಿರೋಧಿಸಿ ಬಂದ್’ಗೆ ಕರೆ ನೀಡಲಾಗಿದೆ. ಕೆಂಪು ಕಲ್ಲು ಸಾಗಾಟ ಮಾಡಿ, ತೀರಾ ಕಡಿಮೆ ದರಕ್ಕೆ ಇಳಿಸುವುದು ಕಂಡುಬಂದಿದೆ. ಇದರಿಂದಾಗಿ ಎಲ್ಲಾ ಕೆಂಪು ಕಲ್ಲು ಸಾಗಾಟದ ಲಾರಿಯವರು ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅನಿರ್ಧಿಷ್ಟಾವಧಿ ಕಾಲ ಬಂದ್’ಗೆ ಕರೆ ನೀಡಿಲಾಗಿದೆ ಎಂದು ಜೈ ಭಾರತ್ ಲಾರಿ ಮಾಲಕರ ಚಾಲಕರ ಸಂಘದ ಅಧ್ಯಕ್ಷ ಧನ್ಯಕುಮಾರ್ ಬೆಳಂದೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.