ಪುತ್ತೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪುತ್ತೂರು ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ಸಹಾಯಕ ಆಯುಕ್ತರ ಮೂಲಕ ಸರಕಾರಕ್ಕೆ ಸೋಮವಾರ ಮನವಿ ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳು ಕಳೆದ ಎರಡು ವರ್ಷಗಳಿಂದ ಸಿಗದೇ ಇರುವ ಹಿನ್ನಲೆಯಲ್ಲಿ ಅವಲಂಬಿತರಿಗೆ ತುಂಬಾ ತೊಂದರೆ ಉಂಟಾಗಿದೆ. ತಕ್ಷಣ ಸಂಬಂಧಿಸಿದ ಇಲಾಖೆಗೆ ಸೂಕ್ತ ನಿರ್ದೇಶನ ನೀಡಿ ತಕ್ಷಣ ಸೌಲಭ್ಯ ಸಿಗವಂತಾಗಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನವಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಕೆ.ಜಯರಾಮ ಕುಲಾಲ್ ಈ ಸಂದರ್ಭದಲ್ಲಿ ಆಗ್ರಹಿಸಿದರು.
ಬಳಿಕ ವಿವಿಧ ಬೇಡಿಕೆಗಳಾದ ಕಟ್ಟಡ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ಕಳೆದ ೆರಡು ವರ್ಷಗಳಿಂದ ಸಿಕ್ಕಿಲ್ಲ. ಆದ್ದರಿಂದ ವಿದ್ಯಾಭ್ಯಾಸ ವಂಚಿತರಾಗಿದ್ದು, ತಕ್ಷಣ ಸಿಗುವಂತಾಬೇಕು, ಅಕ್ರಮ ಕಟ್ಟಡ ಕಾರ್ಮಿಕರ ನೋಂದಾವಣೆಗೆ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು, ಅಕ್ರಮ ಕಾರ್ಮಿಕರನ್ನು ಪತ್ತೆಹಚ್ಚಲು ಕಾರ್ಮಿಕ ಇಲಾಖೆ ಪ್ರತೀ ತಾಲೂಕು ಕೇಂದ್ರಗಳಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಬೇಕು, ಪ್ರತೀ ಕಾರ್ಮಿಕರು ಪ್ರತಿದಿನ 8 ಗಂಟೆ ಸಮರ್ಪಕವಾಗಿ ಕೆಲಸ ಮಾಡುವ ಕುರಿತು ಕಾರ್ಮಿಕ ಇಲಾಖೆ ನಿರ್ದೇಶನ ನೀಡಬೇಕು, ಪುತ್ತೂರಿನಲ್ಲಿ ಕಾರ್ಮಿಕ ಭವನ ಹಾಗೂ ಕೌಶಲ್ಯ ಕೇಂದ್ರವನ್ನು ತೆರೆಯುಬೇಕು ಎಂಬ ಮನವಿಯನ್ನು ಸಹಾಯಕ ಆಯುಕ್ತರ ಮೂಲಕ ಸರಕಾರಕ್ಕೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಬಹುತೇಕ ಸದಸ್ಯರು ಉಪಸ್ಥಿತರಿದ್ದರು.