ಅಸುನೀಗಿದ ಅಂಬಾರಿ ಹೊತ್ತಿದ್ದ ‘ಅರ್ಜುನ’!

ಸಕಲೇಶಪುರ: ಈ ಬಾರಿ ನಾಡಹಬ್ಬ ದಸರಾದಲ್ಲಿ ಅಂಬಾರಿ ಹೊತ್ತಿದ್ದ ಸಾಕಾನೆ ಅರ್ಜುನ ಅಸುನೀಗಿದೆ.

ಸಕಲೇಶಪುರದಲ್ಲಿ ನಡೆದ ಕಾಡಾನೆ ಸೆರೆ ವೇಳೆ ಘಟನೆ ಸಂಭವಿಸಿದೆ. ಕಾಡಾನೆಗೆ ಅರಿವಳಿಕೆ ಚುಚ್ಚುಮದ್ದು ನೀಡುವ ವೇಳೆ, ಕಾಡಾನೆ ದಾಳಿ ನಡೆಸಿದೆ ಎನ್ನಲಾಗಿದೆ. ಈ ಸಂದರ್ಭ ಗಂಭೀರ ಗಾಯಗೊಂಡ ಅರ್ಜುನ ಅಸುನೀಗಿದೆ ಎಂದು ಹೇಳಲಾಗಿದೆ.

ಸಕಲೇಶಪುರದ ಯಸಲೂರಿನಲ್ಲಿ ಘಟನೆ ನಡೆದಿದೆ. ದಾಳಿ ಸಂದರ್ಭ ಮಾವುತರು ಓಡಿ ಹೋಗಿದ್ದಾರೆ. ಈ ಸಂದರ್ಭ ಹಲವರ ಪ್ರಾಣ ಉಳಿಸಲು, ಅರ್ಜುನ ತನ್ನ ಪ್ರಾಣ ಪಣವಾಗಿ ಇಟ್ಟಿದ್ದ. ಇದರಿಂದ ಅರ್ಜುನ ಕೊನೆಯುಸಿರೆಳೆಯುವಂತಾಯಿತು ಎನ್ನಲಾಗಿದೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top