ಪುತ್ತೂರು: ನವರಾತ್ರಿ ಹಬ್ಬದ ಹಿನ್ನಲೆಯಲ್ಲಿ ನ್ಯೂಸ್ ಪುತ್ತೂರು ಏರ್ಪಡಿಸಿದ್ದ ಸರಸ್ವತಿ ಗೀತ ಗಾಯನ ಸ್ಪರ್ಧೆಯ ಬಹುಮಾನ ವಿತರಣೆ ಭಾನುವಾರ ಚುಂಚಶ್ರೀ ಸಭಾಂಗಣದಲ್ಲಿ ನಡೆಯಿತು.




ಸಮರ್ಪಣಾ ಚಾರಿಟೇಬಲ್ ಟ್ರಸ್ಟಿನ ಪ್ರೇರಣಾ ಸಂಸ್ಥೆಯ ವತಿಯಿಂದ ನಡೆದ ರಸಪ್ರಶ್ನೆ ಸ್ಪರ್ಧೆ 2023ರ ಉದ್ಘಾಟನಾ ಸಮಾರಂಭದಲ್ಲಿ ಈ ಬಹುಮಾನವನ್ನು ವಿತರಿಸಲಾಯಿತು. ಸಾರ್ವಜನಿಕ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಸುಮಾ ಕೋಟೆ, ದ್ವಿತೀಯ ಸ್ಥಾನ ಪಡೆದ ಸಾನ್ವಿ ಕಜೆ, ತೃತೀಯ ಸ್ಥಾನ ಪಡೆದ ಶಿವಪ್ರಿಯಾ ಪಿ. ಹಾಗೂ ಶಾಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಸುಪ್ರಜಾ ರಾವ್, ದ್ವಿತೀಯ ಸ್ಥಾನ ಪಡೆದ ಜನನಿ, ತೃತೀಯ ಸ್ಥಾನ ಪಡೆದ ಆರಾಧ್ಯ ಸಿ.ಯು. ಅವರಿಗೆ ಸ್ಮರಣಿಕೆ, ಬೆಳ್ಳಿಯ ಫೊಟೋ, ಹೂ ನೀಡಿ, ಶಾಲು ಹೊದಿಸಿ ಸನ್ಮಾನಿಸಲಾಯಿತು.
ನ್ಯೂಸ್ ಪುತ್ತೂರು ಇದರ ಅಧ್ಯಕ್ಷ ಕೇಶವ ಅಮೈ ಕಲಾಯಿಗುತ್ತು ಅವರು ಬಹುಮಾನ ವಿತರಿಸಿ, ಗೌರವಿಸಿದರು. ಪ್ರೇರಣಾ ಅಧ್ಯಕ್ಷ ಪ್ರವೀಣ್ ಕುಂಟ್ಯಾನ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕರಾದ ಚಿದಾನಂದ ಬೈಲಾಡಿ, ಸೀತಾರಾಮ ಕೇವಳ, ನಾಗೇಶ್ ಕೆಡೆಂಜಿ, ಮುರಳೀಧರ ಕೆ.ಎಲ್. ಉಪಸ್ಥಿತರಿದ್ದರು.