ಪುತ್ತೂರು: ನವರಾತ್ರಿ ಹಬ್ಬದ ಸಂದರ್ಭ ನ್ಯೂಸ್ ಪುತ್ತೂರು ಹಮ್ಮಿಕೊಂಡಿದ್ದ ಸರಸ್ವತಿ ಗೀತ ಗಾಯನ ಸ್ಪರ್ಧೆಯ ಬಹುಮಾನವನ್ನು ಡಿ. 3ರಂದು ತೆಂಕಿಲ ಚುಂಚಶ್ರೀ ಸಭಾಭವನದಲ್ಲಿ ವಿತರಿಸಲಾಗುವುದು.
ಸಾರ್ವಜನಿಕ ಹಾಗೂ ಶಾಲಾ ವಿಭಾಗದಲ್ಲಿ ಸರಸ್ವತಿ ಗೀತ ಗಾಯನ ಸ್ಪರ್ಧೆ ನಡೆದಿತ್ತು. ಸ್ಪರ್ಧೆಗೆ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ತೀರ್ಪುಗಾರರ ತೀರ್ಮಾನದಂತೆ ವಿಜೇತರನ್ನು ಆಯ್ಕೆ ಮಾಡಿದ್ದು, ಅವರಿಗೆ ಡಿ. 3ರಂದು ಬೆಳಿಗ್ಗೆ 9.30ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಬಹುಮಾನ ನೀಡಿ ಗೌರವಿಸಲಾಗುವುದು.
ಫಲಿತಾಂಶದ ವಿವರ ಹೀಗಿದೆ:
ಸಾರ್ವಜನಿಕ ವಿಭಾಗದಲ್ಲಿ ಪ್ರಥಮ ಸುಮಾ ಕೋಟೆ, ದ್ವಿತೀಯ ಸಾನ್ವಿ ಕಜೆ, ತೃತೀಯ ಶಿವಪ್ರಿಯಾ ಪಿ. ಹಾಗೂ ಶಾಲಾ ವಿಭಾಗದಲ್ಲಿ ಪ್ರಥಮ ಸುಪ್ರಜಾ ರಾವ್, ದ್ವಿತೀಯ ಜನನಿ, ತೃತೀಯ ಆರಾಧ್ಯ ಸಿ.ಯು. ವಿಜೇತರಾಗಿದ್ದರು. ಇದಲ್ಲದೇ, ಆಯ್ಕೆಯಾದ ಹಾಡುಗಳನ್ನು ಗುರುತಿಸಿ, ಹಾಡುಗಾರರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ನ್ಯೂಸ್ ಪುತ್ತೂರು ಪ್ರಸಾರ ಮಾಡಿತ್ತು.