ರಾಷ್ಟ್ರದ ಸಾಧನೆಗಳ ಕುರಿತು ಯುವಜನರಿಗಿರುವ ಮಾಹಿತಿ ಜ್ಞಾನವನ್ನು ಹೆಚ್ಚಿಸುವ ನಿಟ್ಟಿನಲ್ಲಿ ದೇಶದ ಎಲ್ಲ ವಿವಿಗಳು, ಕಾಲೇಜುಗಳ ಆವರಣಗಳಲ್ಲಿ ಭಾರತದ ಸಾಧನೆಯ ಚಿತ್ರಣಗಳಿರುವ ಸೆಲ್ಫಿ ಪಾಯಿಂಟ್‌ಗಳನ್ನು ಸ್ಥಾಪಿಸಲು ಯುಜಿಸಿ ನಿರ್ದೇಶಿಸಿದೆ.
ಶಿಕ್ಷಣ ಸಚಿವಾಲಯವು ಹಂಚಿಕೊಂಡಿರುವ 3ಡಿ ಲೇಔಟ್‌ಗಳಲ್ಲಿನ ಅನುಮೋದಿತ ವಿನ್ಯಾಸಗಳಿಗೆ ಅನುಗುಣವಾಗಿ ಮಾತ್ರವೇ ಕ್ಯಾಂಪಸ್‌ನಲ್ಲಿ ಸೆಲ್ಫಿ ಪಾಯಿಂಟ್‌ಗಳನ್ನು ಸ್ಥಾಪಿಸಬೇಕಾಗಿದೆ. ಈ ಸೆಲ್ಫಿ ಪಾಯಿಂಟ್ಸ್ ದೇಶದ ಹೆಮ್ಮೆಯನ್ನು ಪ್ರತಿನಿಧಿಸುವುದು ಮಾತ್ರವಲ್ಲದೇ, ಜಾಗತಿಕ ಮಟ್ಟದಲ್ಲಿ ಭಾರತದ ಬೆಳವಣಿಗೆಯನ್ನು ಉತ್ತೇಜಿಸಿದ ಉಪಕ್ರಮಗಳ ಬಗ್ಗೆ ಪ್ರತಿಯೊಬ್ಬ ನಾಗರಿಕನಿಗೂ ತಿಳಿಸಲು ನೆರವಾಗಲಿದೆ ಎಂದು ತಿಳಿಸಿದೆ.
ವಿದ್ಯಾರ್ಥಿಗಳು ಮತ್ತು ಕ್ಯಾಂಪಸ್ ಸಂದರ್ಶಕರು ಈ ವಿಶೇಷ ಸೆಲ್ಫಿ ಪಾಯಿಂಟ್‌ಗಳಲ್ಲಿ ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ಅವುಗಳನ್ನು ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ದೇಶದ ಸಾಧನೆಯ ಬಗ್ಗೆ ಸಾಮೂಹಿಕ ಹೆಮ್ಮೆಯ ಭಾವ ಜಾಗೃತಗೊಳ್ಳಲು ಸಹಕರಿಸಬೇಕು ಎಂದು ಯುಜಿಸಿ ಕಾರ್ಯದರ್ಶಿ ಮನೀಶ್ ಜೋಶಿ ಹೇಳಿದ್ದಾರೆ.