ಸುಬ್ರಹ್ಮಣ್ಯ: ಕಡಬ ಒಕ್ಕಲಿಗ ಗೌಡ ಸೇವಾ ಸಂಘ, ಸುಬ್ರಹ್ಮಣ್ಯ ಗ್ರಾಮ ಸಮಿತಿ ವತಿಯಿಂದ ಗ್ರಾಮ ಸಮಾವೇಶ ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.
ನಿವೃತ್ತ ಉಪನ್ಯಾಸಕ ಅಂಬೆಕಲ್ ಮುತ್ತಯ್ಯ ಗೌಡ ಸಮಾವೇಶವನ್ನು ಉದ್ಘಾಟಿಸಿ ಶುಭ ಹಾರೈಸಿದರು. ನಿವೃತ್ತ ಪ್ರಾಂಶುಪಾಲ ಅಶೋಕ್ ಕುಮಾರ್ ಮೂಲೆಮಜಲು ಒಕ್ಕಲಿಗ ಗೌಡರು ಹಿಂದಿನಿಂದ ನಡೆದುಕೊಂಡು ಬಂದ ರೀತಿ, ಹಿನ್ನೆಲೆ, ಇತಿಹಾಸ, ಆಚಾರ ವಿಚಾರಗಳು , ಸಂಸ್ಕಾರ, ಸಂಸ್ಕೃತಿಗಳ ಕುರಿತು ಮಾಹಿತಿಗಳನ್ನು ನೀಡಿದರು.
ಸುಬ್ರಹ್ಮಣ್ಯ ಗ್ರಾಮ ಸಮಿತಿ ಅಧ್ಯಕ್ಷ ಡಾl ಎ.ಎ.ತಿಲಕ್ ಅಧ್ಯಕ್ಷತೆ ವಹಿಸಿದ್ದರು ಕಡಬ ತಾಲೂಕು ಒಕ್ಕಲಿಗ ಗೌಡರ ಸಂಘದ ಅಧ್ಯಕ್ಷ ಸುರೇಶ್ ಬೈಲು, ಡಿಸೆಂಬರ್ 26ರಂದು ಕಡಬದಲ್ಲಿ ನಡೆಯುವ ಕಡಬ ತಾಲೂಕು ಒಕ್ಕಲಿಗ ಗೌಡರ ಸಮಾವೇಶ, ಒಕ್ಕಲಿಗ ಸ್ಪಂದನ ಸಹಕಾರಿ ಸಂಘದ ಉದ್ಘಾಟನೆ, ಸ್ವಾಮೀಜಿಯವರ ಮೆರವಣಿಗೆ, ಶೀಲಾನ್ಯಾಸ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.
ವಿದ್ಯಾ ಯೋಜನೆ ಕುರಿತು ಸುಬ್ರಹ್ಮಣ್ಯದ ಡಾl ಶಿವಕುಮಾರ ಹೊಸಳ್ಳಿಕೆ ಮಾಹಿತಿ ನೀಡಿದರು. ಸುಬ್ರಹ್ಮಣ್ಯ ಒಕ್ಕಲಿಗ ಗೌಡರ ಸಂಘದ ಪೂರ್ವ ಅಧ್ಯಕ್ಷ ಲೊಕೇಶ ಬಿ.ಎನ್. ಸ್ಪಂದನ ಸೊಸೈಟಿ ಶೇರ್ ಪಡಕೊಳ್ಳುವ ಬಗ್ಗೆ ತಿಳಿಸಿದರು. ನಿಕಟ ಪೂರ್ವ ಅಧ್ಯಕ್ಷ ಪ್ರಭಾಕರ ಪಟ್ರೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ನಿರ್ದೇಶಕ ಗಿರಿಧರ ಸ್ಕಂದ, ಸುಬ್ರಹ್ಮಣ್ಯ ಗ್ರಾಮ ಸಮಿತಿಯ ಕೋಶಾಧಿಕಾರಿ ನಾರಾಯಣ ಅಗ್ರಹಾರ , ಮಹಿಳಾ ಗ್ರಾಮ ಸಮಿತಿ ಅಧ್ಯಕ್ಷೆ ಭಾರತಿ ದಿನೇಶ್ ಮಾತನಾಡಿದರು.
ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಗ್ರಾಮ ಸಮಿತಿ ವತಿಯಿಂದ ಬೈಲುವಾರು ಸಂಚಾಲಕ ಹಾಗೂ ಸಹ ಸಂಚಾಲಕರನ್ನು ಆಯ್ಕೆ ಮಾಡಲಾಯಿತು. ಸುಬ್ರಹ್ಮಣ್ಯ ಗ್ರಾಮ ಸಮಿತಿ ಪ್ರಧಾನ ಕಾರ್ಯದರ್ಶಿ ವಿಶ್ವನಾಥ ನಡು ತೋಟ ಕಾರ್ಯಕ್ರಮ ನಿರೂಪಿಸಿದರು. ಸ್ಪಂದನ ಸೊಸೈಟಿ ನಿರ್ದೇಶಕ ಗೋಪಾಲ್ ಎಣ್ಣೆ ಮಜಲ್ ವಂದಿಸಿದರು.