ಭತ್ತ ಕಾಯಲು ಗದ್ದೆಗೆ ತೆರಳಿದ್ದ ಸಹೋದರರಿಬ್ಬರು ಸಿಡಿಲು ಬಡಿದು ಮೃತಪಟ್ಟ ಘಟನೆ ಶಿವಮೊಗ್ಗದ ಭದ್ರಾವತಿಯ ಹುಣಸೆಕಟ್ಟೆ ಜಂಕ್ಷನ್ನಲ್ಲಿ ನಡೆದಿದೆ.
ಬೀರು (32) ಹಾಗೂ ಸುರೇಶ್ (30) ಸಿಡಿಲು ಬಡಿತದಿಂದ ಮೃತಪಟ್ಟವರು ಎನ್ನಲಾಗಿದೆ.
ಇಬ್ಬರೂ ಮಂಗಳವಾರ ರಾತ್ರಿ ಕಟಾವಾಗಿದ್ದ ಭತ್ತದ ಗದ್ದೆಗೆ ಭತ್ತ ಕಾಯಲು ತೆರಳಿದ್ದರು. ಈ ವೇಳೆ ಸಿಡಿಲು ಬಡಿದು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಮೃತರ ಶವವನ್ನು ಭದ್ರಾವತಿಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಆಸ್ಪತ್ರೆಯ ಮುಂಭಾಗ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.