ಪುತ್ತೂರು: ಮೈರ ಶ್ರೀ ರಾಮಾಂಜನೇಯ ಗೆಳೆಯರ ಬಳಗದ ಆಶ್ರಯದಲ್ಲಿ ನಡೆದ ಕಕ್ಕೆಪದವು ಸತ್ಯ ಧರ್ಮ ಕಂಬಳೋತ್ಸವದಲ್ಲಿ ವಿಶೇಷ ವೇಶ ಧರಿಸಿ ಭವತಿ ಭಿಕ್ಷಾಂದೇಹಿ ಸೇವಾ ಕಾರ್ಯದ ಮೂಲಕ ನಿಧಿ ಸಂಗ್ರಹ ಮಾಡಲಾಯಿತು.
ಟ್ರಾಕಿಯೋಸೋಪಿಜಿಲ್ ಪಿಸ್ಟುಲಾ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಮಂಗಳೂರು ತಾಲೂಕಿನ ದೇರೆಬೈಲು ಕೊಂಚಾಡಿಯ ಗಣೇಶ್ ನಿರುಪಮಾ ದಂಪತಿಯ ಮೂರು ತಿಂಗಳ ನವಜಾತು ಶಿಶುವಿನ ಚಿಕಿತ್ಸೆಗೆ ಸಂಗ್ರಹವಾದ 21,800 ರೂಪಾಯಿಯನ್ನು ಕಕ್ಕೆಪದವು ಮೈರಾ ಶ್ರೀ ರಾಮಾಂಜನೇಯ ಭಜನಾ ಮಂದಿರದಲ್ಲಿ ಶ್ರೀ ರಾಮಾಂಜನೇಯ ಗೆಳೆಯರ ಬಳಗದ ಪದಾಧಿಕಾರಿಗಳ ಸಮ್ಮುಖದಲ್ಲಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ರಾಮಾಂಜನೇಯ ಗೆಳೆಯರ ಬಳಗದ ಪದಾಧಿಕಾರಿಗಳು, ಟ್ರಸ್ಟ್ ಪದಾಧಿಕಾರಿಗಳು ಹಾಗೂ ಭಜನಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮಗಳಿಗೆ ಸಹಕಾರ ನೀಡಿದ ತುಳುನಾಡ ಪೊರ್ಲು ಸೇವಾ ಟ್ರಸ್ಟ್ ನ ಸೇವಾ ಮಾಣಿಕ್ಯರಿಗೆ, ಬರಿಮಾರು ಶ್ರೀ ಕಾಳಿಕಾಂಬ ಗೊಂಬೆ ಬಳಗದವರಿಗೆ ಅಭಿನಂದನೆ ಸಲ್ಲಿಸಲಾಯಿತು.