ಯುವಕ-ಯುವತಿ ನಾಪತ್ತೆ ! ಹುಡುಕಿಕೊಡಲು ಹೆತ್ತವರಿಂದ ಮನವಿ

ಬಂಟ್ವಾಳ : ಒಂದೇ ವಠಾರದ ಯುವಕ ಮತ್ತು ಯುವತಿ ನಾಪತ್ತೆಯಾದ ಘಟನೆ ಬಂಟ್ವಾಳ ತಾಲೂಕಿನ ಸಜಿಪ ಮುನ್ನೂರು ಗ್ರಾಮದ ಉದ್ದೊಟ್ಟು ಎಂಬಲ್ಲಿ ನಡೆದಿದೆ.

ಸಜೀಪ ಮುನ್ನೂರು ಗ್ರಾಮದ ಉದ್ದೊಟ್ಟು ನಿವಾಸಿ ಅಬ್ದುಲ್ ಹಮೀದ್ ಎಂಬವರ ಪುತ್ರಿ ಆಯಿಸತ್ ರಸ್ನಾ (18) ಹಾಗೂ ಹೈದರ್ ಎಂಬವರ ಪುತ್ರ ಮಹಮ್ಮದ್ ಸಿನಾನ್ (23) ಕಾಣೆಯಾದವರು. ಇಬ್ಬರೂ ಅಕ್ಕಪಕ್ಕದ ಮನೆಯವರು.

ದೇರಳಕಟ್ಟೆಯ ನಡುಪದವು ಪಿ.ಎ.ಕಾಲೇಜಿನಲ್ಲಿ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿನಿಯಾಗಿದ್ದ ಆಯಿಸತ್ ರಸ್ಮಾ ಒಂದು ವಾರಗಳ ಕಾಲ ರಜೆಯಿದ್ದ ಹಿನ್ನಲೆಯಲ್ಲಿ ಮನೆಯಲ್ಲಿದ್ದಳು. ನ.22 ರಾತ್ರಿ ಮನೆಯವರ ಜೊತೆ ಮಲಗಿದ್ದ ಈಕೆ ಬೆಳಿಗ್ಗೆ ಎದ್ದು ನೋಡುವಾಗ ಕಾಣೆಯಾಗಿದ್ದಾಳೆ ಎಂದು ದೂರಿನಲ್ಲಿ ತಿಳಿಸಲಾಗಿದೆ.































 
 

ಸಿನಾನ್ ಕೆಲ ವರ್ಷಗಳ ಕಾಲ ವಿದೇಶದಲ್ಲಿ ಉದ್ಯೋಗ ಮಾಡಿಕೊಂಡಿದ್ದ ಇತ್ತೀಚೆಗೆ ಮರಳಿ ಊರಿಗೆ ಬಂದಿದ್ದು, ಕೂಲಿ ಕೆಲಸ ಮಾಡಿಕೊಂಡಿದ್ದ. ಈತ ಕೂಡ ನ.22. ರಂದು ಮನೆಯವರ ಜೊತೆಗೆ ಮಲಗಿದ್ದು, ನ.23.ರಂದು ಬೆಳಿಗ್ಗೆ ಕಾಣೆಯಾಗಿರುವ ಬಗ್ಗೆ ದೂರಿನಲ್ಲಿ ತಿಳಿಸಲಾಗಿದೆ.

ಅಕ್ಕಪಕ್ಕದ ನಿವಾಸಿಯಾಗಿರುವ ಇವರಿಬ್ಬರು ಪರಿಚಯಸ್ಥರಾಗಿದ್ದು ಸಲುಗೆಯಿಂದ ಇದ್ದರು ಎನ್ನಲಾಗಿದೆ. ಒಂದೇ ದಿನ ಕಾಣೆಯಾಗಿರುವುದರ ಹಿಂದೆ ಪ್ರೇಮ ಪ್ರಣಯದ ಶಂಕೆಯನ್ನು ವ್ಯಕ್ತಪಡಿಸಲಾಗಿದೆ. ಎರಡು ಮನೆಯವರ ಪೋಷಕರು ಕಾಣೆಯಾದ ಇಬ್ಬರನ್ನು ಹುಡುಕಿಕೊಡುವಂತೆ ಬಂಟ್ವಾಳ ನಗರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top