ಅಡಕೆ ಕಳವಿಗೆ ಯತ್ನ | ತಡೆಯಲೆತ್ನಿಸಿದಾಗ ತಲವಾರಿನಿಂದ ಗಾಯಗೊಳಿಸಿದ ಕಳ್ಳರು

ಸವಣೂರು: ವಾಹನದಲ್ಲಿ ಆಗಮಿಸಿದ ಕಳ್ಳರ ಗ್ಯಾಂಗೊಂದು ಅಡಕೆ ಕಳವಿಗೆ ಯತ್ನಿಸಿದಾಗ ಮನೆಯಾತ ನೋಡಿದ್ದು, ಕಳ್ಳರನ್ನು ಹಿಡಿಯಲೆತ್ನಿಸಿದಾಗ ಕಳ್ಳರು ತಲವಾರಿನಿಂದ  ದಾಳಿ ನಡೆಸಿದ ಘಟನೆ ಶನಿವಾರ ಮುಂಜಾನೆ ಸವಣೂರಿನ ಫಾರ್ಮ್ಸ್ ಒಂದರಲ್ಲಿ ನಡೆದಿದೆ.

ಕಡಬ ತಾಲೂಕಿನ ಪುತ್ತೂರು ಸುಬ್ರಹ್ಮಣ್ಯ ರಸ್ತೆಯ ಸರ್ವೆ ಸಮೀಪದ ಪಣೆಮಜಲುನಲ್ಲಿರುವ ರಾಮಚಂದ್ರ ಎಡಪತ್ಯ ಮಾಲಕತ್ವದ ಎಡಪತ್ಯ ಫಾರ್ಮ್ಸ್ ನಲ್ಲಿ ಈ ಘಟನೆ ನಡೆದಿದೆ

ಕಳ್ಳರ ತಂಡ ಕಾರು ಹಾಗೂ ಸ್ಕೂಟರ್‍ ನಲ್ಲಿ ಬಂದು ಅಡಿಕೆ ದೋಚುತ್ತಿದ್ದಾಗ ತೋಟದ ಮಾಲೀಕನ ಪುತ್ರನ ಕಣ್ಣಿಗೆ ಸಿಕ್ಕಿಬಿದ್ದಿದ್ದು ಕಳ್ಳತನ ತಡೆಯಲೆತ್ನಿಸಲು ಬಂದಾಗ ಕಳ್ಳರು ತಲವಾರು ದಾಳಿ ನಡೆಸಿದ್ದಾರೆ. ಇದರಿಂದಾ ರಮಚಂದ್ರ ಎಡಪತ್ಯ ಅವರ ಪುತ್ರ ನಿಷ್ಕಲ್ ರಾಮ್ ಗಾಯಗೊಂಡಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ. ಕಳ್ಳರು ಒಂದು ಕಾರು ಮತ್ತು ಸ್ಕೂಟರ್ ನಲ್ಲಿ ಕಳ್ಳತನಕ್ಕೆ ಬಂದಿದ್ದರು …































 
 

ಶನಿವಾರ ಬೆಳಗ್ಗಿನ ಜಾವ ನಿಷ್ಕಲ್ ಅವರು ಮೈಸೂರಿನಿಂದ ಮನೆಗೆ ಆಗಮಿಸಿದ ವೇಳೆ ಅಡಕೆ ಒಣಹಾಕಿದ ಸೋಲಾರ್ ಗೂಡಿನಿಂದ ಇಬ್ಬರು ಕಳ್ಳರು ಕಾರಿಗೆ ಅಡಿಕೆ ತುಂಬುತ್ತಿರುವುದು ಕಾಣಿಸಿದೆ. ತಕ್ಷಣ ಜಾಗೃತರಾದ ನಿಷ್ಕಲ್ ರವರು ಕಳ್ಳರನ್ನು ಹಿಡಿಯಲು ಮುಂದಾಗಿದ್ದಾರೆ. ಈ ಸಂದರ್ಭ ಕಳ್ಳರು ತಲವಾರಿನಿಂದ ದಾಳಿ ಮಾಡಿದ್ದು, ನಿಶ್ಚಲ್ ಕೈಗೆ ಗಾಯವಾಗಿದೆ. ಆದರೂ ಕಳ್ಳರಲ್ಲಿ ಓರ್ವನನ್ನು ಹಿಡಿದಿಡುವಲ್ಲಿ ಅವರು ಯಶಸ್ವಿಯಾಗಿದ್ದಾರೆ.

ಬಶೀರ್ ಸಿಕ್ಕಿಬಿದ್ದ ಕಳ್ಳ. ಕಳೆದ ಹಲವು ದಿನಗಳಿಂದ ನಿರಂತರ ಅಡಕೆ ಕಳ್ಳತನ ಮಾಡುತ್ತಿರುವುದನ್ನು ಒಪ್ಪಿಕೊಂಡಿರುವ ಬಶೀರ್, ಸುಮಾರು 5 ಲಕ್ಷಕ್ಕೂ ಅಧಿಕ ಮೊತ್ತದ ಅಡಕೆಯನ್ನು ಸುಲಿದಿಟ್ಟ ಗೋದಾಮು ಹಾಗೂ ಸೋಲಾರ್ ಕೊಠಡಿಯಿಂದ ಕಳವು ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಇನ್ನೋರ್ವ ಕಳ್ಳ ಹಕ್ಕೀಂ ಎಂಬಾತನ ಸೂಚನೆಯ ಮೇರೆಗೆ ಕಳ್ಳತನಕ್ಕೆ ಬಂದಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಇನ್ನೋರ್ವ ಆರೋಪಿ ಹಕೀಂ ಎರಡು ಗೋಣಿ ಚೀಲಗಳಲ್ಲಿ ಸುಲಿದಿಟ್ಟಿದ್ದ ರೂ.24000/- ಮೌಲ್ಯದ ಅಡಿಕೆಯನ್ನು ಸ್ಕೂಟರನಲ್ಲಿ ಹೇರಿಕೊಂಡು ಪರಾರಿಯಾಗಿರುತ್ತಾನೆ ಎಂದು ತಿಳಿದು ಬಂದಿದೆ. ಈ ಕುರಿತು ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top