ಪುತ್ತೂರು: ವಿದ್ಯಾರ್ಥಿಗಳಲ್ಲಿ ವ್ಯವಹಾರಿಕ ಜ್ಞಾನವನ್ನು ವೃದ್ಧಿಸುವ ಸಲುವಾಗಿ ಹಮ್ಮಿಕೊಳ್ಳಲಾಗುವ ಮೆಟ್ರಿಕ್ ಮೇಳ ಸ.ಹಿರಿಯ ಪ್ರಾಥಮಿಕ ಶಾಲೆ ಸಜಂಕಾಡಿಯಲ್ಲಿ ನಡೆಯಿತು.

ವಿದ್ಯಾರ್ಥಿಗಳು ಬಗೆಬಗೆಯ ಸೊಪ್ಪು, ತರಕಾರಿ, ವಿವಿಧ ಬಗೆಯ ತಿನಿಸುಗಳನ್ನು ವ್ಯವಸ್ಥಿತವಾಗಿ ಜೋಡಿಸಿ ಮಾರಾಟದಲ್ಲಿ ತೊಡಗಿ ಸಂಭ್ರಮಿಸಿದರು .
ಮುಖ್ಯ ಅತಿಥಿಯಾಗಿ ನಿವೃತ್ತ ಶಿಕ್ಷಕಿ ಸಾವಿತ್ರಿ ಕೆ ಮಾತನಾಡಿ, ಮೆಟ್ರಿಕ್ ಮೇಳಗಳು ಮಕ್ಕಳಲ್ಲಿ ವ್ಯವಹಾರ ಜ್ಞಾನ ಹೆಚ್ಚಿಸಿ ಕ್ರಿಯಾಶೀಲ ರಾಗುವಂತೆ ಮಾಡುತ್ತವೆ ಎಂದರು
ಬಡಗನ್ನೂರು ಗ್ರಾಮ ಪಂಚಾಯಿತಿ ಸದಸ್ಯ ರವಿರಾಜ್ ರೈ ಸಜಂಕಾಡಿ ಮೆಟ್ರಿಕ್ ಮೇಳ ಉದ್ಘಾಟಿಸಿ ಶುಭ ಹಾರೈಸಿದರು. ಸಮೂಹ ಸಂಪನ್ಮೂಲ ವ್ಯಕ್ತಿ ಶಶಿಕಲಾ ಬಿ, ಎಸ್ ಡಿ ಎಂ ಸಿ ಅಧ್ಯಕ್ಷೆ ಯಶೋಧಾ ಕೆ ಉಪಾಧ್ಯಕ್ಷ ರಜಾಕ್, ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಸುಮಲತಾ, ಶಿಕ್ಷಕರು ಹಾಗೂ ಪೋಷಕರು ಉಪಸ್ಥಿತರಿದ್ದರು .