ಸುಬ್ರಹ್ಮಣ್ಯ; ಚೆಕ್ ಬೌನ್ಸ್ ಪ್ರಕರಣದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಮೂಲದ ಟಿ.ಎಸ್ ಶ್ರೀನಾಥ ಎಂಬವರ ಆರೋಪವನ್ನು ಸಾಬೀತು ಮಾಡಿರುವ ಚಿಕ್ಕಮಗಳೂರು ಚಿಕ್ಕಮಗಳೂರು ಜೆಎಂಎಸಿ ನ್ಯಾಯಾಲಯ, ನಾಲ್ಕು ತಿಂಗಳ ಶಿಕ್ಷೆ ತಪ್ಪಿದಲ್ಲಿ 5 ಲಕ್ಷ 18 ಸಾವಿರ 100 ರೂ. ದಂಡ ವಿಧಿಸುವಂತೆ ಆದೇಶಿಸಿದೆ.
ವ್ಯವಹಾರ ಸಂಬಂಧ ದುಡ್ಡಿಗೆ ಪ್ರತಿಯಾಗಿ ಶ್ರೀನಾಥ್ ಅವರು ಚೆಕ್ ನೀಡಿದ್ದರು. ಖಾತೆ ಬರಿದಾಗಿದ್ದು, ಚೆಕ್ ಬೌನ್ಸ್ ಆಗಿತ್ತು. ಚೆಕ್ ಪಡಕೊಂಡವರು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದು, ಚಿಕ್ಕಮಗಳೂರು ಸಿವಿಲ್ ಜಡ್ಜ್ ಮತ್ತು ಐಎಂಎಪ್ ಸಿ ಕೋರ್ಟ್ ವಿಚಾರಣೆ ಕೈಗೆತ್ತಿಕೊಂಡಿತು.
ಇದೀಗ ವಿಚಾರಣೆ ಪೂರ್ಣಗೊಳಿಸಿರುವ ನ್ಯಾಯಾಲಯ, ಆರೋಪಿಯ ಅಪರಾಧವನ್ನು ಸಾಬೀತುಗೊಳಿಸಿ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದೆ. ಆರೋಪಿಗೆ 4 ತಿಂಗಳು ಜೈಲು ಶಿಕ್ಷೆ ವಿಧಿಸಿದೆ. ತಪ್ಪಿದಲ್ಲಿ 5,18,100 ರೂ. ದಂಡ ಪಾವತಿಸುವಂತೆ ಆದೇಶದಲ್ಲಿ ತಿಳಿಸಿದೆ.
ದೂರುದಾರರ ಪರವಾಗಿ ದೇವೆಂದರ್ ಕುಮಾರ್ ಜೈನ್ ಹಾಗೂ ಶಿಕ್ಷೆಗೊಳಗಾದವರ ಪರವಾಗಿ ಕೆ. ಆರ್ ಪ್ರಶಾಂತ್ ವಾದಿಸಿದ್ದರು.