ಕಾಣಿಯೂರು: ಇಡ್ಯಡ್ಕ ಕುಟುಂಬದ ಯಜಮಾನರಾಗಿದ್ದ ದಿ. ಶೂರಪ್ಪ ಗೌಡ ಅವರ ಸ್ಮರಣಾರ್ಥ ಕೀಲೆ ಎಂಬಲ್ಲಿ ನೂತನ ಪ್ರಯಾಣಿಕರ ತಂಗುದಾಣವನ್ನು ಉದ್ಘಾಟಿಸಲಾಯಿತು.
ಇಡ್ಯಡ್ಕ ಕುಟುಂಬದ ಹಿರಿಯರಾದ ಶೀನಪ್ಪ ಗೌಡ ಅವರು ದೀಪ ಬೆಳಗಿಸಿ, ತಂಗುದಾಣವನ್ನು ಉದ್ಘಾಟಿಸಿದರು.
ಸುಮಾರು 85 ಸಾವಿರ ರೂ. ವೆಚ್ಚದಲ್ಲಿ ಪ್ರಯಾಣಿಕರ ತಂಗುದಾಣವನ್ನು ನಿರ್ಮಿಸಲಾಗಿದೆ. ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ದಿನೇಶ್ ಮೆದು, ನಿವೃತ್ತ ಮುಖ್ಯಗುರು ಕೆ. ರಘುನಾಥ್ ರೈ ಅವರು ಶುಭ ಹಾರೈಸಿದರು.
ಅರಣ್ಯ ಅಧಿಕಾರಿ ಯಶೋದರ ಕೆ., ಮನೋಹರ್, ಸುರೇಶ್ ರೈ ಸುದೀಮುಳ್ಳು, ಸಾಂತಪ್ಪ ಗೌಡ, ಸುಂದರ ಗೌಡ, ಶೂರಪ್ಪ ಗೌಡರ ಮಕ್ಕಳು, ಕುಟುಂಬಸ್ಥರು ಉಪಸ್ಥಿತರಿದ್ದರು.