ರಾಮಕುಂಜ: ಆದಿಚುಂಚನಗಿರಿಯಲ್ಲಿ ನಡೆದ ರಾಜ್ಯಮಟ್ಟದ 17ರ ವಯೋಮಾನದ ಬಾಲಕರ ಕಬಡ್ಡಿ ಪಂದ್ಯಾಟದಲ್ಲಿ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆ ದ್ವಿತೀಯ ಸ್ಥಾನ ಪಡೆದುಕೊಂಡಿದೆ.
ಕಾರ್ತಿಕ್ ಬೆಸ್ಟ್ ರೈಡರ್ ಆಗಿ ಹೊರಹೊಮ್ಮಿದ್ದು, ಕಾರ್ತಿಕ್, ಶ್ರೇಯಸ್ ಹಿತೇಶ್, ಸತ್ಯ ನಾಲ್ವರು ರಾಷ್ಟ್ರಮಟ್ಟದ ಕಬಡ್ಡಿ ತಂಡಕ್ಕೆ ಆಯ್ಕೆಯಾಗಿದ್ದಾರೆ.
ನಿವೃತ್ತ ಯುವಜನ ಕ್ರೀಡಾಧಿಕಾರಿ ಮಾಧವ್ ಬಿ.ಕೆ., ಕೋಚ್ ಜಸ್ವಂತ್ ಗೌಡ, ದೈಹಿಕ ಶಿಕ್ಷಣ ಶಿಕ್ಷಕಿ ಪ್ರಫುಲ್ಲ ರೈ ತರಬೇತಿ ನೀಡಿದ್ದಾರೆ. ತಂಡವನ್ನು ಶಾಲಾ ಆಡಳಿತ ಮಂಡಳಿ, ಮುಖ್ಯಗುರುಗಳು, ಶಿಕ್ಷಕರು ಅಭಿನಂದಿಸಿದ್ದಾರೆ.