‘ಕಾಂತಾರ 2’ ಮುಹೂರ್ತ ಫಿಕ್ಸ್!

ಪಂಜುರ್ಲಿ – ಗುಳಿಗ ದೈವಗಳ ಕಥಾ ಹಂದರವಿದ್ದ ಕಾಂತಾರ ಸಿನಿಮಾ ಭಾರತ ಸಿನಿ ರಂಗದಲ್ಲಿ ಹೊಸ ಭಾಷ್ಯ ಬರೆದಿತ್ತು. ಇದೀಗ ಕಾಂತಾರ 2 ಸಿನಿಮಾಕ್ಕೆ ವೇದಿಕೆ ಸಿದ್ಧಗೊಂಡಿದೆ.

ಹೌದು, ನವಂಬರ್ 27ಕ್ಕೆ ಕುಂದಾಪುರದ ಕುಂಭಾಶಿ ದೇವಸ್ಥಾನದಲ್ಲಿ ಕಾಂತಾರ 2 ಸಿನಿಮಾಕ್ಕೆ ಮುಹೂರ್ತ ನೆರವೇರಲಿದೆ. ಕಾಂತಾರ ಸಿನಿಮಾಕ್ಕೂ ಇದೇ ದೇವಸ್ಥಾನದಲ್ಲಿ ಸ್ಕ್ರಿಪ್ಟ್ ಪೂಜೆ ನಡೆದಿತ್ತು.

ಈ ಚಿತ್ರದ ಕಥೆ 14ನೇ ಶತಮಾನದಿಂದ ಆರಂಭವಾಗಲಿದೆಯಂತೆ. ಮೊದಲ ಚಿತ್ರದಂತೆ ಈ ಚಿತ್ರದ ಮುಹೂರ್ತವನ್ನೂ ಸರಳವಾಗಿ ಮಾಡಲು ನಿರ್ಮಾಣ ಸಂಸ್ಥೆ ಯೋಚಿಸಿದೆ. ಈ ಚಿತ್ರಕ್ಕಾಗಿ ರಿಷಬ್ ಶೆಟ್ಟಿ ಭರ್ಜರಿ ತಯಾರಿ ಮಾಡಿಕೊಂಡಿದ್ದು, ಈ ಬಾರಿ ಅವರು ಕುದುರೆ ಸವಾರಿ, ಕಲರಿಪಯಟ್ಟು ಕಲೆಗಳನ್ನು ಕಲಿತು ಅಖಾಡಕ್ಕೆ ಇಳಿಯುತ್ತಿದ್ದಾರೆ. ಅದಕ್ಕಾಗಿ ತಮ್ಮ ಲುಕ್ ಕೂಡ ಬದಲಾಯಿಸಿ, ಉಡುಪಿ ಸಮೀಪ ಬೀಡು ಬಿಟ್ಟು ಆಳವಾದ ಅಧ್ಯಯನ ಮಾಡಿ, ಈ ಸಿನಿಮಾ ಕಥೆ ಸಿದ್ಧಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.































 
 

ಕಾಂತಾರ 2 ಸಿನಿಮಾ ಕುರಿತಾಗಿ ಚಿತ್ರತಂಡವು ಪಂಜುರ್ಲಿ ಮತ್ತು ಗುಳಿಗ ದೈವದ ಮೊರೆ ಹೋಗಿದ್ದು, ಅವು ಕೂಡ ಮುಹೂರ್ತಕ್ಕೆ ಅಸ್ತು ಎಂದಿವೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ಸಿನಿಮಾ ತಂಡ ಕೂಡ ಮುಹೂರ್ತಕ್ಕೆ ಸರ್ವ ಸಿದ್ಧತೆ ಮಾಡಿದೆ. ಸಿನಿಮಾದ ಮುಹೂರ್ತ ಮುಗಿಸಿ ಡಿಸೆಂಬರ್‌ನಲ್ಲಿ ಚಿತ್ರೀಕರಣ ಆರಂಭಿಸಲು ರಿಷಬ್ ಶೆಟ್ಟಿ ಪ್ಲ್ಯಾನ್ ಮಾಡಿದ್ದಾರೆ ಎಂದು ಹೇಳಲಾಗಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top