ಪುತ್ತೂರು: ಇಲ್ಲಿನ ದರ್ಬೆ ನಿವಾಸಿ ಡಾ. ಕುಶಾಲಪ್ಪ ಅಭಿಕಾರ್ (90 ವ.) ಅವರು ಅಲ್ಪಕಾಲದ ಅನಾರೋಗ್ಯದಿಂದ ನ. 22ರಂದು ಮಗಳ ಮನೆಯಾದ ಇಡ್ಯಡ್ಕದಲ್ಲಿ ನಿಧನರಾದರು.
ಮೂಲತಃ ಚಾರ್ವಕಾದ ಅಭಿಕಾರ್ ಕುಟುಂಬದವರಾದ ಡಾ. ಕುಶಾಲಪ್ಪ ಅಭಿಕಾರ್ ಅವರು ಕೆನಡಾದಲ್ಲಿ ಎಂ.ಬಿ.ಬಿ.ಎಸ್. ವ್ಯಾಸಂಗ ಮುಗಿಸಿದ್ದರು. ನಂತರ ಅಲ್ಲೇ ವೈದ್ಯಕೀಯ ವೃತ್ತಿ ನಡೆಸುತ್ತಿದ್ದರು. ನಿವೃತ್ತಿಯ ಬಳಿಕ ಪುತ್ತೂರಿಗೆ ಆಗಮಿಸಿ ರೋಟರಿ ಸೇರಿದಂತೆ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು.
ಪುತ್ತೂರು ರೋಟರಿ ಕ್ಲಬ್ಬಿನ ಸಕ್ರೀಯ ಸದಸ್ಯರಾಗಿದ್ದ ಡಾ. ಕುಶಾಲಪ್ಪ ಗೌಡ ಅಭಿಕಾರ್ ಅವರು, ಕೊಡುಗೈ ದಾನಿಯಾಗಿ ಗುರುತಿಸಿಕೊಂಡಿದ್ದರು. ಮೃತರು ಮೂರು ಹೆಣ್ಣು ಮಕ್ಕಳು, ಅಳಿಯಂದಿರನ್ನು, ಮೊಮ್ಮಕ್ಕಳನ್ನು ಅಗಲಿದ್ದಾರೆ.