ಬೆಳ್ತಂಗಡಿ: ಟೊಮೇಟೊ ಸಾಗಾಟದ ಟೆಂಪೋ ಪಲ್ಟಿಯಾದ ಘಟನೆ ಸೋಮವಾರ ರಾತ್ರಿ ಚಾರ್ಮಾಡಿ ಚೆಕ್ ಪೋಸ್ಟ್ ಸಮೀಪದ ವಲಸರಿ ಎಂಬಲ್ಲಿ ನಡೆದಿದೆ.

ಚಾಲಕನ ನಿಯಂತ್ರಣ ತಪ್ಪಿದ ಟೆಂಪೋ ರಸ್ತೆ ಬದಿಯ ಚರಂಡಿಗೆ ಪಲ್ಟಿಯಾಗಿ ಬಿದ್ದಿತು. ಚಿಕ್ಕಮಗಳೂರು ಕಡೆಯಿಂದ ಉಜಿರೆಯತ್ತ ಟೊಮೇಟೊ ಸಾಗಾಟ ಮಾಡಲಾಗುತ್ತಿತ್ತು.
ವಾಹನದಲ್ಲಿದ್ದವರು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಸ್ಥಳೀಯರ ಸಹಕಾರದಿಂದ ಉರುಳಿ ಬಿದ್ದ ವಾಹನವನ್ನು ತೆರವು ಮಾಡಲಾಯಿತು.