ಲಷ್ಕರ್‌ ಎ ತೊಯ್ಬಾ ಭಯೋತ್ಪಾದಕ ಸಂಘಟನೆ: ಇಸ್ರೇಲ್‌ ಘೋಷಣೆ

ಮುಂಬೈ ಭಯೋತ್ಪಾದಕ ದಾಳಿ(26/11)ಯ 15ನೇ ವರ್ಷಾಚರಣೆಗೂ ಮುನ್ನವೇ ಮಹತ್ವದ ಬೆಳವಣಿಗೆ ಎಂಬಂತೆ ಪಾಕಿಸ್ತಾನ ಮೂಲದ ಲಷ್ಕರ್‌ ಎ ತೊಯ್ಬಾ ಭಯೋತ್ಪಾದಕ ಸಂಘಟನೆ ಎಂದು ಇಸ್ರೇಲ್ ಅಧಿಕೃತವಾಗಿ ಘೋಷಿಸಿದೆ ಎಂದು ವರದಿಯಾಗಿದೆ.

ಇದೊಂದು ಮಾರಣಾಂತಿಕ ಹಾಗೂ ಖಂಡನಾರ್ಹ ಭಯೋತ್ಪಾದಕ ಸಂಘಟನೆಯಾಗಿದೆ ಎಂದು ತಿಳಿಸಿರುವ ಇಸ್ರೇಲ್‌, ಲಷ್ಕರ್‌ ಇ ತೊಯ್ಬಾ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಲು ನಿರ್ಧರಿಸಲಾಗಿದೆ ಎಂದು ಹೇಳಿದೆ. ಆದರೆ ಈ ಬಗ್ಗೆ ಭಾರತದಿಂದ ಯಾವುದೇ ಮನವಿ ಬಂದಿಲ್ಲ ಎಂದು ಸ್ಪಷ್ಟಪಡಿಸಿದೆ.

ಭಾರತ ಸರ್ಕಾರ ಯಾವುದೇ ವಿನಂತಿ ಮಾಡದಿದ್ದರೂ ಕೂಡ ಲಷ್ಕರ್‌ ಸಂಘಟನೆ ಕುರಿತ ಎಲ್ಲಾ ಅಗತ್ಯ ಪ್ರಕ್ರಿಯೆಗಳನ್ನು ಇಸ್ರೇಲ್‌ ಪೂರ್ಣಗೊಳಿಸಿದ್ದು, ಲಷ್ಕರ್‌ ಭಯೋತ್ಪಾದಕ ಸಂಘಟನೆ ಎಂಬುದಾಗಿ ಇಸ್ರೇಲ್‌ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ ಎಂದು ಇಸ್ರೇಲ್‌ ರಾಯಭಾರಿ ಕಚೇರಿ ಬಿಡುಗಡೆ ಮಾಡಿರುವ ಪ್ರಕಟನೆ ತಿಳಿಸಿದೆ.































 
 

ಲಷ್ಕರ್‌ ಇ ತೊಯ್ಬಾ ನೂರಾರು ಭಾರತೀಯರನ್ನು ಹತ್ಯೆಗೈದಿದೆ. 2008ರ ನವೆಂಬರ್‌ 26ರ ಲಷ್ಕರ್‌ ಪೈಶಾಚಿಕ ಕೃತ್ಯ ಹೇಯವಾದದ್ದು. ಈ ನಿಟ್ಟಿನಲ್ಲಿ ಶಾಂತಿ ಬಯಸುವ ಎಲ್ಲಾ ದೇಶಗಳು ಮತ್ತು ಸಮಾಜ ಇಂತಹ ಸಂಘಟನೆಯನ್ನು ನಿಷೇಧಿಸುವುದು ಸೂಕ್ತವಾಗಿದೆ.

2008ರಲ್ಲಿ ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಆರು ಮಂದಿ ಜ್ಯೂಗಳು ಸೇರಿದಂತೆ 166 ಮಂದಿ ಕೊನೆಯುಸಿರೆಳೆದಿದ್ದರು. ನೂರಾರು ಜನರನ್ನು ನಾರಿಮನ್‌ ಹೌಸ್‌, ಓಬೆರಾಯ್‌ ಟ್ರೈಡೆಂಟ್‌, ತಾಜ್‌ ಮಹಲ್‌ ಹೋಟೆಲ್‌ ಗಳಲ್ಲಿ ಒತ್ತೆಯಾಳುಗಳನ್ನಾಗಿ ಇರಿಸಿಕೊಳ್ಳಲಾಗಿತ್ತು. 26/11 ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಒದಗಿಸಿಕೊಡಬೇಕಾಗಿದೆ. ಭಯೋತ್ಪಾದನೆ ಮಾನವೀಯತೆಯನ್ನು ಅಣಕಿಸುವಂತಿದೆ. 26/11ರ ದಾಳಿಯ ಘಟನೆ ಹಿನ್ನೆಲೆ ಜಗತ್ತು ಭಾರತದ ಜತೆ ಕೈಜೋಡಿಸಿರುವುದಾಗಿ ವರದಿ ವಿವರಿಸಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top