ಪುತ್ತೂರು: ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನವೀಕರಣಗೊಂಡ ಶ್ರೀ ಮಹಾಲಿಂಗೇಶ್ವರ ಸಭಾಭವನ ಸಮರ್ಪಣೆ ಸಮಾರಂಭ ಇಂದು (ನ. 20) ನಡೆಯಲಿದೆ.
ಬೆಳಿಗ್ಗೆ ಶ್ರೀ ರುದ್ರ ಹವನ ಸಹಿತ ಗಣಪತಿ ಹವನ ನಡೆದು 11 ಗಂಟೆಗೆ ಪೂರ್ಣಾಹುತಿಗೊಳ್ಳಲಿದೆ. ಬಳಿಕ ದೇವಸ್ಥಾನ ವಠಾರದಲ್ಲಿ ಪುನರುತ್ಥಾನದ ವಿವಿಧ ಕಾರ್ಯಗಳ ಕುರಿತು ನಿಧಿ ಸಂಚಯನ ಕಾರ್ಯಕ್ರಮ ನಡೆಯಲಿದೆ.
ಸಮಾರಂಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಶಾಸಕ ಸಂಜೀವ ಮಠಂದೂರು, ಸಹಾಯಕ ಆಯುಕ್ತ ಗಿರೀಶ್ ನಂದನ್, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪ್ರಶಾಂತ್ ಪಕ್ಕಳ, ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ನಗರಸಭೆ ಸದಸ್ಯ ಪಿ.ಜಿ. ಜಗನ್ನಿವಾಸ ರಾವ್ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.
ಕಾರ್ಯಕ್ರಮ ಹೀಗಿರಲಿದೆ.:
ಮಹಾಲಿಂಗೇಶ್ವರ ಸಭಾಭವನ ಸಮೃದ್ಧಿಗೋಸ್ಕರ
ಉಗ್ರಾಣ ತುಂಬಿಸುವುದು
ಸುವಸ್ತುವಿನೊಂದಿಗೆ ಭವನ ಪ್ರವೇಶ
ಶ್ರೀ ಮಹಾಲಿಂಗೇಶ್ವರನ ನಡೆಯಿಂದ ಈ ಸುವಸ್ತುಗಳೊಂದಿಗೆ ಭವನಕ್ಕೆ ತೆರಳುವುದು. ಮಂಗಳ ವಾದ್ಯ, ಪ್ರಾಜ್ವಲ್ಯಮಾನ ದೀಪ, ಕಲಶ ಹಿಡಿದ ಮಹಿಳೆಯರು 2 ಭತ್ತ – ಅಕ್ಕಿ ಕಳಸದೊಂದಿಗೆ, ಹೂ, ಬಂಗಾರ, ಬೆಳ್ಳಿ, ಹಣ, ಅರಿಶಿನ ಕುಂಕುಮ / ಕಲಶಗಳು, ತರಕಾರಿ, ತೆಂಗಿನ ಕಾಯಿ, ಅಡಿಕೆ ಗೊನೆ, ಕಾಫಿ, ಹಣ್ಣುಗಳು /ಧಾನ್ಯಗಳು, ತುಳಸಿ ಗಿಡ, ತುಪ್ಪ, ಹಾಲು, ಮಗು /ಶಿಶು, ಮುತ್ತೈದೆಯರು, ದಂಪತಿಗಳು, ಎಲ್ಲರೂ ಹಚ್ಚಿದ ಹಣತೆ ಯೊಂದಿಗೆ ಭವನಕ್ಕೆ ಪ್ರವೇಶ ಮಾಡಲಿದ್ದಾರೆ.