ಪುತ್ತೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ದ.ಕ., ತಾಲೂಕು ಆರೋಗ್ಯಾಧಿಕಾರಿ ಕಚೇರಿ, ಕೊಂಬೆಟ್ಟು ಪ.ಪೂ. ಕಾಲೇಜು ಸಹಯೋಗದೊಂದಿಗೆ ಮೈತ್ರಿ ಮುಟ್ಟಿನ ಕಪ್ ವಿತರಣಾ ಕಾರ್ಯಕ್ರಮ ಸೋಮವಾರ ಕೊಂಬೆಟ್ಟು ಕಾಲೇಜು ಸಭಾಂಗಣದಲ್ಲಿ ನಡೆಯಿತು.
ಶಾಸಕ ಅಶೋಕ್ ಕುಮಾರ್ ರೈ ಶಾಲಾ ವಿದ್ಯಾರ್ಥಿಗಳಿಗೆ ಮುಟ್ಟಿನ ಕಪ್ ವಿತರಣೆ ಮಾಡಿ, ಸುರಕ್ಷತೆ ಮತ್ತು ಸ್ವಚ್ಛತಾ ದೃಷ್ಟಿಯಿಂದ ಆರೋಗ್ಯದ ಕಡೆ ಸರಕಾರ ಹೆಚ್ಚಿನ ಗಮನ ನೀಡುತ್ತಿದ್ದು, ಈ ನಿಟ್ಟಿನಲ್ಲಿ ಕಪ್ ವಿತರಣೆ ಆಗುತ್ತಿದೆ. ಈ ಹಿಂದೆ ಸ್ಯಾನಿಟರಿ ಕಿಟ್ ನೀಡಲಾಗುತ್ತಿತ್ತು. ಅದರಲ್ಲಿ ತೊಂದರೆ ಕಾಣಿಸಿತ್ತು. ಮೈತ್ರಿ ಸಂಶೋಧಿತ ವ್ಯವಸ್ಥೆಯಾಗಿದೆ, ಆರೋಗ್ಯ ಪೂರ್ಣ ಸಮಾಜಕ್ಕೆ ಸರಕಾರ ಮಹತ್ತರದ ಕೊಡುಗೆಯಾಗಿದೆ ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ಪ್ರಾಸ್ತಾವಿಕವಾಗಿ ಮಾತನಾಡಿ, 10 ವರ್ಷದ ತನಕ ಒಂದು ಕಪ್ ಬಳಕೆ ಮಾಡಬಹುದು. ಶುಚಿಯಾಗಿಯೂ ಇಟ್ಟುಕೊಳ್ಳಬಹುದು. ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳಿಲ್ಲ ಎಂದರು.
ವೇದಿಕೆಯಲ್ಲಿ ಪ್ರೌಢಶಾಲಾ ಕಾರ್ಯಾಧ್ಯಕ್ಷ ಜೋಕಿಂ ಡಿ’ಸೋಜಾ, ಉಪಪ್ರಾಂಶುಪಾಲೆ ಮರ್ಸಿ ಮಮತಾ ಉಪಸ್ಥಿತರಿದ್ದರು. ಆರೋಗ್ಯ ಸಿಬ್ಬಂದಿ ನಿಶಾ ಸ್ವಾಗತಿಸಿದರು.