ಪುತ್ತೂರು: ಶಾಸಕ ಅಶೋಕ್ ಕುಮಾರ್ ರೈ ಶಿಫಾರಸ್ಸಿನಂತೆ ಪುತ್ತೂರು ತಾಲೂಕಿನ 14 ಮಂದಿಗೆ ಎಂಡೋ ಮಾಸಾಶನಕ್ಕೆ ವಿತರಣೆಗೆ ಆದೇಶವಾಗಿದೆ.
ಕಳೆದ ಹಲವು ವರ್ಷಗಳ ಹಿಂದೆ ಮಾಸಾಶನಕ್ಕಾಗಿ ಅರ್ಜಿ ಸಲ್ಲಿಸಿದ್ದರೂ ಮಾಸಾಶನ ಬಂದಿರಲಿಲ್ಲ. ಇಲಾಖೆಗೆ ಅಲೆದಾಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಕಳೆದ ಎರಡು ತಿಂಗಳ ಹಿಂದೆ ಈ ಬಗ್ಗೆ ಎಂಡೋ ಪೀಡಿತ ಮಕ್ಕಳ ಪೋಷಕರು ಶಾಸಕರಲ್ಲಿ ಈ ವಿಚಾರವನ್ನು ತಿಳಿಸಿದ್ದರು. ಎಂಡೋ ಮಾಸಾಶನಕ್ಕಾಗಿ ಅರ್ಜಿ ಹಾಕಿದ ಎಲ್ಲಾ ಫಲಾನುಭವಿಗಳ ಮಾಹಿತಿಯನ್ನು ಪಡೆದುಕೊಂಡ ಶಾಸಕರು ಅರ್ಹತೆ ಹೊಂದಿರುವ ಎಲ್ಲರಿಗೂ ತಕ್ಷಣವೇ ಮಾಸಾಶನವನ್ನು ಮಂಜೂರು ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಶಾಸಕರ ಶಿಫಾರಸ್ಸಿನಂತೆ ನೆಟ್ಟಣಿಗೆ ಮುಡ್ನೂರು ಗ್ರಾಮದ ಅಝಾಶಹ್‌ಮಾ (8) ನೆಟ್ಟಣಿಗೆ ಮುಡ್ನೂರು ಗ್ರಾಮದ ಮುಹಮ್ಮದ್ ಮುಬಶ್ಯಿರ್ (23), ಪಡುವನ್ನೂರು ಗ್ರಾಮದ ಕತಿಜತುಲ್ ಕುಬ್‌ರಾ (7 ) ಹಿರೆಬಂಡಾಡಿ ಗ್ರಾಮದ ಕೆ ಮಹಮ್ಮದ್ ತ್ವಾಹಾ (23 ) ಬಲ್ನಾಡು ಗ್ರಾಮದ ರಕ್ಷಿತ್ ಕುಮಾರ್ (14) ನಿಡ್ಪಳ್ಳಿ ಗ್ರಾಮದ ಪ್ರಿಯಾ (31 ) ಕೊಡಿಪ್ಪಾಡಿ ಗ್ರಾಮದ ಹಾರ್ದಿಕ್ (8) ಬೆಟ್ಟಂಪಾಡಿ ಗ್ರಾಮದ ಶಿಶಿರ್ (5) ಒಳಮೊಗ್ರು ಗ್ರಾಮದ ಅನ್ವೇಶ್ ಕೆ ಎಚ್ (14) ಒಳಮೊಗ್ರು ಗ್ರಾಮದ ಶರತ್ ((26) ಒಳಮೊಗ್ರು ಗ್ರಾಮದ ಮಹಮ್ಮದ್ ಶಮ್ಮಾಸ್ (12) ಅರಿಯಡ್ಕ ಗ್ರಾಮದ ಫಾತಿಮತ್ ಸನಾ (6) ಮುಂಡೂರು ಗ್ರಾಮದ ಮುಹಮ್ಮದ್ ಇಯಾಝ್ (6) ಪುತ್ತೂರು ನಗರ ರಕ್ಷಿತ್ ಕೆ (30) ರವರಿಗೆ ತಿಂಗಳಿಗೆ ರೂ 4 ಸಾವಿರದಂತೆ ಪ್ರತೀ ತಿಂಗಳು ಮಾಸಾಶನ ದೊರೆಯಲಿದೆ.
ನನ್ನ ಕ್ಷೇತ್ರದ ಅನೇಕ ಮಂದಿ ಎಂಡೋ ಪೀಡಿತರು ಮಾಸಾಶನಕ್ಕೆ ಅರ್ಜಿ ಹಾಕಿದ್ದರೂ ಅವರಿಗೆ ಮಾಸಾಶನ ಸಿಗದೆ ವಂಚಿತರಾಗಿದ್ದರು. ಅಧಿಕಾರಿಗಳ ಬೇಜವಾಬ್ದಾರಿ ಮತ್ತು ದಾಖಲೆಗಳ ಕೊರತೆಯಿಂದಲೂ ಕೆಲವೊಂದು ಮಂದಿಗೆ ಮಾಸಾಶನ ನೀಡಿರಲಿಲ್ಲ. ಅಂಥವರನ್ನು ಕಚೇರಿಗೆ ಕರೆಸಿ ಅವರಿಂದ ಸೂಕ್ತ ದಾಖಲೆಗಳನ್ನು ಪಡೆದು ಶಾಸಕರ ಕಚೇರಿಯ ಮೂಲಕವೇ ಇಲಾಖಾ ಅಧಿಕಾರಿಗಳ ಸಂಪರ್ಕಿಸಿ ವಂಚಿತರಾಗಿದ್ದ ಎಂಡೋ ಪೀಡಿತರಿಗೆ ಮಾಸಾಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.