ಅಕ್ಷಯ ಕಾಲೇಜಿನಲ್ಲಿ ಪಿಯು ವಿಭಾಗದ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ ‘ಅಟೆರ್ನಸ್ 2k23″

ಪುತ್ತೂರು: ಸಂಪ್ಯದಲ್ಲಿ ಅಕ್ಷಯ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ದಕ್ಷಿಣ ಕನ್ನಡ, ಕಾಸರಗೋಡು, ಕೊಡಗು ಜಿಲ್ಲೆಗಳ ಪಿಯು ವಿಭಾಗದ ಅಂತರ್ ಕಾಲೇಜ್ ಸಾಂಸ್ಕೃತಿಕ ಸ್ಪರ್ಧೆ ‘ಅಟೆರ್ನಸ್ 2k23″   ಕಾಲೇಜು ಸಭಾಂಗಣದಲ್ಲಿ ನಡೆಯಿತು.

ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಂ ರೆIಅಶೋಕ್ ರಾಯನ್ ಕ್ರಾಸ್ತ ಕಾರ್ಯಕ್ರಮ ಉದ್ಘಾಟಿಸಿ, ಗ್ರಾಮೀಣ ಪ್ರದೇಶದಲ್ಲಿ ವೃತ್ತಿಪರ ಶಿಕ್ಷಣಕ್ಕೆ ಇಂದಿನ ಆಧುನಿಕ ಜಗತ್ತಿನಲ್ಲಿ ಬಹಳ ಪ್ರಾಮುಖ್ಯತೆಯಿದ್ದು ಬೇಡಿಕೆಯೂ ಇದೆ. ಈ ನಿಟ್ಟಿನಲ್ಲಿ ಇಲ್ಲಿನ ಅಕ್ಷಯ ಕಾಲೇಜಿನಲ್ಲಿ ವೃತ್ತಿಪರ ಕೋರ್ಸ್ ಗಳನ್ನು ಆರಂಭಿಸಿ ಗ್ರಾಮೀಣ ಪ್ರದೇಶ ಹಾಗೂ ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಬಹಳ ಅನುಕೂಲತೆಗಳನ್ನು ಒದಗಿಸಿದೆ ಎಂದು ಹೇಳಿದರು.

ಕಾಲೇಜಿನ ಅಧ್ಯಕ್ಷ ಜಯಂತ ನಡುಬೈಲು ಅಧ್ಯಕ್ಷತೆ ವಹಿಸಿ ಮಾತನಾಡಿ, ಪಿಯು ವಿದ್ಯಾರ್ಥಿಗಳ ಪ್ರತಿಭೆಯನ್ನು ಪ್ರಚುರಪಡಿಸಲು ಅಕ್ಷಯ ಕಾಲೇಜು ವೇದಿಕೆಯನ್ನು ನಿರ್ಮಿಸಿಕೊಟ್ಟಿದೆ. ಪ್ರತಿಯೊಬ್ಬ ವಿದ್ಯಾರ್ಥಿಗೂ ಪ್ರತಿಭೆ ಇದೆ. ಆದರೆ ಆ ಪ್ರತಿಭೆಯ ಅನಾವರಣವಾಗಬೇಕಿದೆ ಎಂದು ಹೇಳಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.































 
 

ಪ್ರಕೃತಿ ಪ್ರಾರ್ಥಿಸಿದರು. ಕಾಲೇಜಿನ ಆಡಳಿತ ಅಧಿಕಾರಿ ಅರ್ಪಿತ್ ಟಿ.ಎ. ಸ್ವಾಗತಿಸಿದರು.  ಕಾರ್ಯಕ್ರಮದ ಸಂಯೋಜಕಿ ರಶ್ಮಿ ಕೆ. ವಂದಿಸಿದರು ಕಾಲೇಜಿನ ಪ್ರಾಂಶುಪಾಲ ಸಂಪತ್ ಕೆ. ಪಕ್ಕಳ ಪ್ರಾಸ್ತಾವಿಕವಾಗಿ ಮಾತನಾಡಿದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ಮೇಘಶ್ರೀ ಉದ್ಘಾಟಕರ ಪರಿಚಯ ಮಾಡಿದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ಭವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.

ಸಾಂಸ್ಕೃತಿಕ ಸ್ಪರ್ಧೆ ‘ಅಟೆರ್ನಸ್ 2k23″ ಅಂಗವಾಗಿ ಫೇಸ್ ಆಫ್ ಅಟೆರ್ನಸ್, ಫ್ಯಾನ್ಸಿ ಡ್ರೆಸ್ ರೋಲ್ ಪ್ಲೇ, ಕ್ವಿಜ್ *ಡಿಬೇಟ್, ಸಮೂಹ ಗಾಯನ, ಸೋಲೊ ನೃತ್ಯ, ಬೆಂಕಿಯಿಲ್ಲದ ಅಡುಗೆ, ಪೇಪರ್ ಔಟ್ ಫಿಟ್, ಪಾಟ್ ಡೆಕೋರೇಶನ್, ಪೋಸ್ಟರ್ ಮೇಕಿಂಗ್ ನಡೆಯಿತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top