ವಿಶ್ವಕಪ್ : ನಾಳೆ ನಡೆಯಲಿದೆ ಭಾರತ-ಆಸ್ಟ್ರೇಲಿಯಾ ನಡುವೆ ಜಿದ್ದಾಜಿದ್ದಿನ ಸೆಣಸಾಟ | ಭಾರತದ ಗೆಲುವಿಗಾಗಿ ಪೂಜೆ-ಪುನಸ್ಕಾರಗಳು, ಶುಭ ಹಾರೈಕೆಗಳು

ಬೆಂಗಳೂರು: ಭಾನುವಾರ ವಿಶ್ವದ ಅತೀ ದೊಡ್ಡ ಸ್ಟೇಡಿಯಂನಲ್ಲಿ ನಡೆಯಲಿರುವ ವಿಶ್ವಕಪ್ ಕ್ರಿಕೆಟ್ ಪಂದ್ಯಾಟ ಭಾರತ ಹಾಗೂ ಆಸ್ಟ್ರೇಲಿಯ ತಂಡಗಳ ನಡುವೆ ನಡೆಯಲಿದ್ದು, ಒಂದೆಡೆ ಭಾರತದ ಆಟಗಾರರು ಸತತ ಅಭ್ಯಾಸದಲ್ಲಿ ತೊಡಗಿಕೊಂಡಿದ್ದರೆ, ಇನ್ನೊಂದೆಡೆ ಭಾರತ ತಂಡದ ಗೆಲುವಿಗಾಗಿ ದೇವಸ್ಥಾನಗಳಲ್ಲಿ ಕ್ರಿಕೆಟ್ ಅಭಿಮಾನಿಗಳಿಂದ ವಿಶೇಷ ಪೂಜೆ, ಪುನಸ್ಕಾರಗಳು ನಡೆಯುತ್ತಿವೆ.

ಬೆಂಗಳೂರಿನ ನಿಮಿಷಾಂಭ ದೇವಾಲಯದಲ್ಲಿ ಭಾರತ ಗೆಲುವಿಗಾಗಿ ವಿಶೇಷ ಹೋಮ ಹವನಗಳನ್ನು ನಡೆಸಲಾಗುತ್ತಿದೆ. ಮತ್ತೊಂದೆಡೆ ಕಾಪು ಕಡಲ ಕಿನಾರೆಗಳಲ್ಲಿ ಭಾರತ ಗೆಲುವಿಗಾಗಿ ಮರಳಿನಲ್ಲಿ ವಿಶ್ವಕಪ್ ಹೋಲುವ ಶಿಲ್ಪಗಳನ್ನು ರಚಿಸಿ ಶುಭ ಹಾರೈಸುವ ಸಂಗತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಭಾರತ ತಂಡದ ಪೋಸ್ಟರ್‍ ಗಳನ್ನು ಹಿಡಿದು ವಿದ್ಯಾರ್ಥಿಗಳಿಂದ ಆಲ್‍ ದಿ ಬೆಸ್ಟ್ ಎಂಬ ಶುಭ ಹಾರೈಗಳು ಕೇಳೀ ಬರುತ್ತಿವೆ. ಧಾರವಾಡದಲ್ಲಿ ಕಲಾವಿನೋರ್ವ ಮಣ್ಣಿನಿಂದ ವಿಶ್ವಕಪ್ ತಯಾರಿಸಿ ವಿಶ್ವಕಪ್ ನಮ್ದೆ ಎಂಬ ಶುಭ ಹಾರೈಕೆಯನ್ನೂ ಸಲ್ಲಿಸಿದ್ದಾರೆ.































 
 

ಭಾರತ ಈ ಹಿಂದೆ 2003 ರಲ್ಲಿ ವಿಶ್ವಕಪ್ ಫೈನಲ್‍ ನಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಿತ್ತು. ರಿಕಿ ಪಾಂಟಿಂಗ್ ನೇತೃತ್ವದ ಆಸ್ಟ್ರೇಲಿಯಾ 125 ರನ್‍ ಗಳಿಂದ ಜಯ ಸಾಧಿಸಿತ್ತು.

ಈ ಬಾರಿ ಭಾರತ ತಂಡ ಚೆನ್ನೈನಲ್ಲಿ  ನಡೆದ ಪಂದ್ಯಾಟದಲ್ಲಿ ಆಸ್ಟ್ರೇಲಿಯಾ ವಿರುದ್ಧ 6 ವಿಕೇಟ್ ಜಯ ಸೇರಿದಂತೆ ಆಡಿದ ಎಲ್ಲಾ 10 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಪ್ಯಾಟ್ ಕಮಿನ್ಸ್ ಬಳಗ 9 ಗ್ರೂಪ್‍ ಪಂದ್ಯಗಳ ಪೈಕಿ 7 ರಲ್ಲಿ ಜಯ ಸಾಧಿಸಿದೆ. ಸೆಮಿ ಫೈನಲ್‍ ನಲ್ಲಿ ದಕ್ಷಿಣ ಆಫ್ರಿಕಾವನ್ನು 3 ವಿಕೇಟ್ ಗಳಿಂದ ಸೋಲಿಸಿ 8ನೇ ಬಾರಿ ವಿಶ್ವಕಪ್ ಫೈನಲ್‍ ಗೆ ತಲುಪಿದೆ.

ಅಂತೂ ನಾಳೆ ನಡೆಯಲಿರುವ ವಿಶ್ವಕಪ್ ಪಂದ್ಯಾಟದಲ್ಲಿ ಕಪ್ ಯಾರ ಮುಡಿಗೇರಲಿದೆ ಎಂದು ಕಾದು ನೋಡಬೇಕಾಗಿದೆ. ಭಾರತದ ಗೆಲುವಿಗಾಗಿ ಎಲ್ಲರ ಶುಭಹಾರೈ ಇರಲಿ ಎಂದು ಆಶೀಸೋಣ

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top