ಮಂಗಳೂರು: ಬೆಂಕಿ ತಗುಲಿ ಗಂಭೀರ ಗಾಯಗೊಂಡಿದ್ದ ಹಿರಿಯ ನಾಗರಿಕರೋರ್ವರು ಮೃತಪಟ್ಟ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಕೂಳೂರು ಪೊಯ್ಯೇಲು ನಿವಾಸಿ ದಿ. ಮದನಪ್ಪ ಶೆಟ್ಟಿ ಅವರ ಪತ್ನಿ ಸುನೀತಾ ಎಂ. (84) ಮೃತಪಟ್ಟವರು.
ನವಂಬರ್ 14ರಂದು ದೇವರ ಕೋಣೆಯಲ್ಲಿಟ್ಟಿದ್ದ ದೀಪದಿಂದ ಸೀರೆಗೆ ಬೆಂಕಿ ಹತ್ತಿಕೊಂಡಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.