ಝೀ ಕನ್ನಡ ಡ್ರಾಮಾ ಜ್ಯೂನಿಯರ್ ಸೀಸನ್ 5 ರ ಮೆಗಾ ಆಡಿಷನ್‍ ಗೆ ರಾಮಕುಂಜದ ಆತ್ಮಿ ಗೌಡ ಎಸ್. ಆಯ್ಕೆ

ಪುತ್ತೂರು: ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಡ್ರಾಮಾ ಜ್ಯೂನಿಯರ್ ಸೀಸನ್ 5 ರ ಮೆಗಾ ಆಡಿಷನ್‍ ಗೆ ರಾಮಕುಂಜ ಗ್ರಾಮದ ನಾಲ್ಕು ವರ್ಷದ ಆತ್ಮಿ ಗೌಡ  ಎಸ್‍. ಆಯ್ಕೆಯಾಗಿದ್ದಾರೆ.

ಮೆಗಾ ಆಡಿಷನ್ ನ.18 ಹಾಗೂ 19 ರಂದು ರಾತ್ರಿ 9 ಗಂಟೆಗೆ ಪ್ರಸಾರಗೊಳ್ಳಲಿದೆ. ರಾಜ್ಯಾದ್ಯಂತ ನಡೆಸಿದ ಮೊದಲ ಹಂತದ ಆಡಿಷನ್‍ ನಲ್ಲಿ ಸುಮಾರು 30 ಸಾವಿರ ಪ್ರತಿಭೆಗಳು ಭಾಗವಹಿಸಿದ್ದು, ಆತ್ಮಿ ಗೌಡ ಎಸ್‍ ಮುಂದಿನ ಹಂತದ ಮೆಗಾ ಆಡಿಷನ್‍ ಗೆ ಆಯ್ಕೆಯಾಗಿದ್ದಾರೆ. ಆತ್ಮಿ ಗೌಡ ಈ ಹಿಂದೆ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಛೋಟಾ ಛಾಂಪಿಯನ್ ಸೀಸನ್‍ 3 ರಲ್ಲಿ ವಿನ್ನರ್ ಆಗಿ ಹೊರಹೊಮ್ಮಿದ್ದರು.

ಅವರು ಕಡಬ ತಾಲೂಕಿನ ರಾಮಕುಂಜ ಗ್ರಾಮದ ಜೋಗಪ್ಪ ಗೌಡ ಮತ್ತು ಚಂದ್ರಾವತಿ ದಂಪತಿ ಮೊಮ್ಮಗಳು, ಸುಜಿತ್ ಎಸ್‍. ಹಾಗೂ ಉಮಾಶ್ರೀ ಪಿ.ಬಿ. ದಂಪತಿ ಪುತ್ರಿ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top