ಮಂಗಳೂರು-ಬೆಂಗಳೂರು ನಡುವೆ ಮತ್ತೆರಡು ವಿಮಾನ!

ಮಂಗಳೂರುಏರ್ ಇಂಡಿಯಾ ಎಕ್ಸ್‌ಪ್ರೆಸ್ (ಎಐಇ) ಮಂಗಳೂರು ಮತ್ತು ಬೆಂಗಳೂರು ನಡುವೆ ಎರಡು ವಿಮಾನಗಳ ಸೇವೆಯನ್ನು ಆರಂಭಿಸಿದ್ದು, ಈ ಎರಡೂ ನಗರಗಳ ನಡುವಿನ ಸಂಪರ್ಕವನ್ನು ವಿಸ್ತರಿಸಿದೆ.

ಇದರೊಂದಿಗೆ ಮಂಗಳೂರಿಗೆ ಈಗ ಒಟ್ಟು ಏಳು ವಿಮಾನಗಳು ರಾಜ್ಯ ರಾಜಧಾನಿಯಿಂದ ಸಂಚರಿಸಲಿವೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ. ಮೊದಲನೇ ವಿಮಾನ IX 782 ಮಂಗಳವಾರದಿಂದ ಕಾರ್ಯನಿರ್ವಹಿಸಲು ಪ್ರಾರಂಭಿಸಿದೆ. ಎರಡನೇ ವಿಮಾನ IX1795 ಕಣ್ಣೂರು-ಬೆಂಗಳೂರು-ಮಂಗಳೂರು ಮಾರ್ಗದಲ್ಲಿ ಕಾರ್ಯನಿರ್ವಹಿಸಲಿದೆ.

ಹೊಸ ವಿಮಾನವು ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ, ವಿಮಾನ ನಿಲ್ದಾಣವು ಸಾಂಪ್ರದಾಯಿಕ ಜಲಫಿರಂಗಿ ಗೌರವವನ್ನು ನೀಡಿತು. ವಿಮಾನದಲ್ಲಿದ್ದ ಮೊದಲ ಬ್ಯಾಚ್ ಪ್ರಯಾಣಿಕರಿಗೆ ಆತ್ಮೀಯ ಸ್ವಾಗತ ನೀಡಲಾಯಿತು.



































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top