ಪುತ್ತೂರು: ಪುತ್ತಿಲ ಪರಿವಾರ ಆರ್ಯಾಪು ಗ್ರಾಮ ಸಮಿತಿ ಆಯೋಜಕತ್ವದಲ್ಲಿ ಸಾರ್ವಜನಿಕ ಶ್ರೀ ಲಕ್ಷ್ಮೀ ಪೂಜೆಯ ಆಮಂತ್ರಣ ಬಿಡುಗಡೆ ಕಾಯ೯ಕ್ರಮ ಕುಂಜೂರು ಶ್ರೀ ದುಗಾ೯ಪರಮೇಶ್ವರೀ ದೇವಸ್ಥಾನದಲ್ಲಿ ನಡೆಯಿತು.
ಡಿ.3 ರಂದು ಹಿಂದೂ ಸಮಾಜದ ಐಕ್ಯತೆಗಾಗಿ ಮತ್ತು ಲೋಕ ಕಲ್ಯಾಣಾರ್ಥವಾಗಿ ನಡೆಯುವ ಸಾರ್ವಜನಿಕ ಶ್ರೀ ಲಕ್ಷ್ಮೀ ಪೂಜೆಯ ಅಂಗವಾಗಿ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಉದ್ಘಾಟಿಸುವರು. ಪುತ್ತಿಲ ಪರಿವಾರದ ಆರ್ಯಾಪು ಗ್ರಾಮ ಸಮಿತ ಅಧ್ಯಕ್ಷ ವಿಶ್ವನಾಥ ಗೌಡ ಜಿ. ಸಂಟ್ಯಾರು ಅಧ್ಯಕ್ಷತೆ ವಹಿಸುವರು. ವಾರಿಣಿ ನಾಗರಾಜ್ ಮಂಗಳಾದೇವಿ ಧಾರ್ಮಿಕ ಭಾಷಣ ಮಾಡುವರು. ಮುಖ್ಯ ಅತಿಥಿಗಳಾಗಿ ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಮಾರ್ತ, ಪ್ರಗತಿಪರ ಕೃಷಿಕರಾದ ಬಿ.ರಾಮಭಟ್ ಬಂಗಾರಡ್ಕ, ಗೋಪಾಲ ಭಟ್ ಕುಂಜೂರುಪಂಜ, ಹಾಲು ಒಕ್ಕೂಟ ಸಮಿತಿಯ ರಾಮಚಂದ್ರ ಪ್ರಭು ದೇವಸ್ಯ, ವಾಣಿ ಸುಬ್ರಹ್ಮಣ್ಯ ಬಲ್ಯಾಯ, ವರಮಹಾಲಕ್ಷ್ಮೀ ಪೂಜಾ ಸಮಿತಿ ಮಾಜಿ ಅಧ್ಯಕ್ಷೆ ಉಮಾವತಿ ಪುರಂದರ ರೈ ಪಾಲ್ಗೊಳ್ಳುವರು.
ಆಮಂತ್ರಣ ಬಿಡುಗಡೆ ಸಂದರ್ಭದಲ್ಲಿ ಪಂಚಾಯಿತಿ ಸದಸ್ಯ ಸುಬ್ರಮಣ್ಯ ಬಲ್ಯಾಯ, ಪುತ್ತಿಲ ಪರಿವಾರ ಪ್ರಮುಖರಾದ ರಾಜುಶೆಟ್ಟಿ , ಪ್ರವೀಣ್ ತಿಂಗಳಾಡಿ, ಕ್ರಷ್ಣಪ್ರಸಾದ್ ಶೆಟ್ಟಿ, ಅರುಣ್ ಭಟ್ ಹಾಗು ಆಯಾ೯ಪು ಗ್ರಾಮ ಉಸ್ತುವಾರಿಗಳಾಗಿರುವ ಪ್ರಜ್ವಲ್ ಘಾಟೆ, ನವೀನ್ ರೈ ಆಯಾ೯ಪು ಹಾಗೂ ಇನ್ನೀತರರು ಉಪಸ್ಥಿತರಿದ್ದರು