ಬೆಂಗಳೂರು: ಯತೀಂದ್ರ ಅವರ ಸಂಭಾಷಣೆಯ ವೀಡಿಯೋ ವೈರಲ್ ಆದ ಘಟನೆಗೆ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ಫೋನ್ ಸಂಭಾಷಣೆಯಲ್ಲಿ ವರ್ಗಾವಣೆಯ ವಿಷಯ ಮಾತನಾಡಲಾಗಿದೆಯೇ? ಇಲ್ಲ. ಹಾಗಿದ್ದು ವರ್ಗಾವಣೆಗೆ ಲಿಂಕ್ ಮಾಡುವುದು ಯಾಕೆ ಎಂದು ಪ್ರಶ್ನಿಸಿದರು. ಒಂದು ವೇಳೆ ಈ ಬಗ್ಗೆ ಒಂದೇ ಒಂದು ಸಾಕ್ಷ್ಯ ತೋರಿಸಿದರೆ ರಾಜಕೀಯ ನಿವೃತ್ತಿ ಘೋಷಿಸುತ್ತೇನೆ ಎಂದು ಸವಾಲೆಸೆದರು.
ಮೈಸೂರಿನ ಜನಸಂಪರ್ಕ ಸಭೆಯೊಂದರಲ್ಲಿ ಯತೀಂದ್ರ ಅವರು ಸಿಎಂ ಸಿದ್ದರಾಮಯ್ಯ ಅವರ ಜೊತೆ ಫೋನ್ ಸಂಭಾಷಣೆ ನಡೆಸುವ ವೀಡಿಯೋ ಒಂದು ವೈರಲ್ ಆಗಿತ್ತು. ಇದರ ಬಗ್ಗೆ ಬರೆದುಕೊಂಡಿದ್ದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ತನ್ನ ಟ್ವಿಟ್ಟರ್ ಖಾತೆಯಲ್ಲಿ ವೀಡಿಯೋವನ್ನು ಶೇರ್ ಮಾಡಿಕೊಂಡಿದ್ದರು.