ಪುತ್ತೂರು: ಮಾನಭಂಗ ಯತ್ನ ಪ್ರಕರಣ ಸಂಬಂಧಿಸಿದಂತೆ ಯುವನೋರ್ವನನ್ನು ಪೊಲೀಸರು ಕೇರಳದಲ್ಲಿ ಬಂಧಿಸಿದ್ದಾರೆ.
ಅಪ್ರಾಪ್ತೆ ಯುವತಿಯ ಮಾನಭಂಗ ಯತ್ನದಲ್ಲಿ ಆರೋಪಿ ವಿರುದ್ಧ ಪುತ್ತೂರು ಮಹಿಳಾ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಪ್ರಕರಣದ ಕುರಿತು ಡಿವೈಎಸ್ಪಿ ಡಾ.ಗಾನ ಪಿ.ಕುಮಾರ್, ಇನ್ಸ್ಪೆಕ್ಟರ್ ಎಂ.ಎನ್.ರಾವ್ ಅವರ ಮಾರ್ಗದರ್ಶನದಂತೆ ಪುತ್ತೂರು ಮಹಿಳಾ ಠಾಣೆಯ ಎಸ್.ಐ. ಭವಾನಿ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಕುಮಾರಸ್ವಾಮಿ ಹಾಗೂ ಸುಚಿನ್ ಅವರು ಆರೋಪಿಯನ್ನು ಕೇರಳದ ಕೊಚ್ಚಿ ಸಮೀಪದ ರೈಲ್ವೇ ನಿಲ್ದಾಣವೊಂದರಲ್ಲಿ ಬಂಧಿಸಿರುವುದಾಗಿ ತಿಳಿದು ಬಂದಿದೆ.
ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.