ಚೈತ್ರಾ ಕುಂದಾಪುರ ಮೇಲೆ ಹಲ್ಲೆ!!

ಬೆಂಗಳೂರು: ವಂಚನೆ ಪ್ರಕರಣದಲ್ಲಿ ಜೈಲು ಸೇರಿರುವ ಚೈತ್ರಾ ಕುಂದಾಪುರ ಅವರಿಗೆ ಜೈಲಿನಲ್ಲಿದ್ದರೂ ಸಂಕಷ್ಟ ಮಾತ್ರ ತಪ್ಪಿಲ್ಲ.

ಪರಪ್ಪನ ಅಗ್ರಹಾರದಲ್ಲಿ ಚೈತ್ರಾ ಕುಂದಾಪುರ ಮೇಲೆ ಹಲ್ಲೆ ಮಾಡಲಾಗಿದೆ. ಮಹಿಳಾ‌ ವಿಚಾರಣಾಧೀನ ಕೈದಿಗಳ ಬ್ಯಾರಕ್‌ನಲ್ಲಿ ಆಫ್ರಿಕನ್ ಮಹಿಳಾ ಕೈದಿಗಳು ಚೈತ್ರಾ ಮೇಲೆ ಅಟ್ಯಾಕ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಭಾನುವಾರ ಮಧ್ಯಾಹ್ನ ರಾಷ್ಟ್ರಗೀತೆ ವಿಚಾರಕ್ಕೆ ಆಫ್ರಿಕನ್ ಮಹಿಳಾ ಕೈದಿಗಳು ಹಾಗೂ ಚೈತ್ರಾ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಚೈತ್ರಾ ಮೇಲೆ ಅಟ್ಯಾಕ್ ಮಾಡಿದ್ದಾರೆ ಆಫ್ರಿಕನ್ ಮಹಿಳಾ ಕೈದಿಗಳು. ಚೈತ್ರಾ ಮಾತ್ರವಲ್ಲದೇ ಆಕೆಯ ಜೊತೆಗಿದ್ದ ಮೂವರು ಸ್ಥಳೀಯ ಮಹಿಳಾ ಕೈದಿಗಳ ಮೇಲೂ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪರಪ್ಪನ ಅಗ್ರಹಾರ ಪೊಲೀಸರಿಗೆ ಚೈತ್ರಾ ದೂರು ನೀಡಿದ್ದಾರೆ ಎಂದು ಹೇಳಲಾಗಿದೆ.



































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top