ಪುತ್ತೂರು: ಪ್ರಸಿದ್ಧ ಚಿನ್ನಾಭರಣಗಳ ಮಳಿಗೆ ಮುಳಿಯ ಜ್ಯುವೆಲ್ಲರ್ಸ್‍ನಲ್ಲಿ ‘ಮುಳಿಯ ಚಿನ್ನೋತ್ಸವ’ ಕಾರ್ಯಕ್ರಮ ಶುಕ್ರವಾರ ಉದ್ಘಾಟನೆಗೊಂಡಿತು.
ನಿವೃತ್ತ ಸಿಡಿಪಿಒ ಶಾಂತಿ ಹೆಗಡೆ ದೀಪ ಬೆಳಗಿಸಿ ಉದ್ಘಾಟಿಸಿ, ಭಾರತೀಯ ಸಂಸ್ಕೃತಿಯಲ್ಲಿ ಚಿನ್ನ ಮಹತ್ತರ ಪಾತ್ರ ವಹಿಸಿದ್ದು, ಜತೆಗೆ ಆರೋಗ್ಯ ವೃದ್ಧಿಯಲ್ಲೂ ಮಹತ್ವವನ್ನು ಪಡೆದಿದೆ. ಈ ವಿಚಾರದಲ್ಲಿ ವೈಜ್ಞಾನಿಕ ಸತ್ಯವೂ ಆಡಗಿದೆ ಎಂದ ಅವರು, ಸಂಸ್ಥೆಯಲ್ಲಿ ಚಿನ್ನಾಭರಣ, ವಜ್ರ, ಬೆಳ್ಳಿ ಆಭರಣಗಳು ಪರಿಶುದ್ಧತೆಯಿಂದ ಕೂಡಿದ್ದು, ಗ್ರಾಹಕರ ಆಯ್ಕೆಗೆ ಅನುಗುಣವಾಗಿದೆ. ಸರಳ, ಸಜ್ಜನಿಕೆ, ಸಂಪ್ರದಾಯ ಮನಸ್ಸಿನೊಂದಿಗೆ ಸಂಸ್ಥೆಯ ಯಶಸ್ವಿಯಾಗಿ ಮುನ್ನಡೆಯುತ್ತಿದೆ ಎಂದು ಹೇಳಿದರು.
ಚಿನ್ನೋತ್ಸವದ ಪ್ರಥಮ ಖರೀದಿದಾರರಾದ ಆಕಾಶ್ ರೈ ಮಾತನಾಡಿ, ಕಾರ್ಯಕ್ರಮದಲ್ಲಿ ಪಾಲ್ಗೊಂಡದ್ದು ಖುಷಿ ತಂದಿದೆ. ಸಂಸ್ಥೆಯಲ್ಲಿ ಚಿನ್ನಾಭರಣಗಳ ಉತ್ತಮ ಕಲೆಕ್ಷನ್ ಜತೆಗೆ ಸಿಬ್ಬಂದಿ ವರ್ಗದವರ ಸಹಕಾರ ತುಂಬಾ ಇದೆ ಎಂದು ಹೇಳಿದರು.
ಸಂಸ್ಥೆಯ ಆಡಳಿತ ನಿರ್ದೇಶಕಿ ಕೃಷ್ಣವೇಣಿ ಮುಳಿಯ ಮಾತನಾಡಿ, ಕಾಮಧೇನು ಕೇಳಿದ್ದನ್ನು ಹೇಗೆ ಕೊಡುತ್ತದೋ ಹಾಗೇ ಬಂಗಾರ ಬದುಕಿಗೆ ಭರವಸೆ, ಆತ್ಮವಿಶ್ವಾಸ, ಆಸರೆ ನೀಡುತ್ತದೆ. ನಿತ್ಯ ವಿನೂತನ ಬಂಗಾರ ನಮ್ಮ ಬದುಕಿಗೆ ಶೃಂಗಾರ ಎಂದರು.
ಸಂಸ್ಥೆಯ ನಾಮದೇವ್ ಮಲ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ನ.10 ರಿಂದ ಆರಂಭಗೊಂಡು ನ.30 ರ ತನಕ ನಡೆಯಲಿದೆ. ಚಿನ್ನೋತ್ಸವ ಮಹತಿ ಕಲೆಕ್ಷನ್ ಅಂದರೆ ಆಂಟಿಕ್-ಟೆಂಪಲ್ ಸಂಗ್ರಹ, ಸಿಲ್ವರ್ ಆಭರಣಗಳು ಸೇರಿದಂತೆ ವಜ್ರಾಭರಣ, ಮುತ್ತಿನ ಹಾರ, ಚಿನ್ನಾಭರಣಗಳ ವಿವಿಧ ವಿನ್ಯಾಸಗಳೊಂದಿಗೆ ನಡೆಯಲಿದೆ ಎಂದರು.
ಕಾರ್ಯಕ್ರಮದಲ್ಲಿ ಜಿನ್ನಾಭರಣಗಳ ವಿವಿಧ ವಿನ್ಯಾಸಗಳನ್ನು ಪ್ರದರ್ಶಿಸಲಾಯಿತು. ಪ್ರಥಮ ಗ್ರಾಹಕ ಆಕಾಶ್ ರೈ ಅವರಿಗೆ ಚಿನ್ನಾಭರಣ ಹಸ್ತಾಂತರಿಸಲಾಯಿತು.
ಸಂಸ್ಥೆಯ ನಯನ, ಸಂಜೀವ ಅತಿಥಿಗಳನ್ನು ಗೌರವಿಸಿದರು. ಆಶಾರಾಣಿ ಪ್ರಾರ್ಥಿಸಿದರು. ಸಂಸ್ಥೆಯ ಯತೀಶ್ ಸ್ವಾಗತಿಸಿದರು. ಸೌರಭ ರಾವ್ ಕಾರ್ಯಕ್ರಮ ನಿರೂಪಿಸಿದರು. ಶಾಖಾ ಉಪಪ್ರಬಂಧಕ ಪ್ರವೀಣ್ ವಂದಿಸಿದರು.