ಪುತ್ತೂರು: ಶಾಲಾ ವಿದ್ಯಾರ್ಥಿಗಳಲ್ಲಿ ಹೊಸ ಆವಿಷ್ಕಾರಗಳನ್ನು ಹಾಗೂ ವೈಜ್ಞಾನಿಕ ಚಿಂತನೆಗಳನ್ನು ಬೆಳೆಸುವ ಸಲುವಾಗಿ ಕಾರ್ಯನಿರ್ವಹಿಸುತ್ತಿರುವ ಇನ್‍ಸೆಫ್ ರೀಜನಲ್ ಸೈನ್ಸ್ ಫೇರ್ ಇಂಡಿಯಾ ನಡೆಸಿರುವ ಇನ್‍ಸೆಫ್ ರೀಜನಲ್ ಸೈನ್ಸ್ ಫೇರ್ ನಲ್ಲಿ ಭಾಗವಹಿಸಲು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಏಳು ಪ್ರಾಜೆಕ್ಟ್ ಗಳು ಆಯ್ಕೆಯಾಗಿವೆ.
8ನೇ ತರಗತಿ ವಿದ್ಯಾರ್ಥಿಗಳಾದ ಓಂಕಾರ್ ಮಯ್ಯ, ಗೌತಮ ಕೃಷ್ಣ ಕೆ, ಅತಿನ್ ಎಸ್ ಪ್ರಭು ಹಾಗೂ ಧನ್ವಿತ್ ಎಮ್. ಕೆ. ತಂಡ, ಎನ್ ಅಭಯ್, ಆರ್ಯನ್ ಸಿ ಆರ್ ಹಾಗೂ ದಿಶಾಂತ್ ಕೆ. ತಂಡ, 9ನೇ ತರಗತಿಯ ವಿದ್ಯಾರ್ಥಿಗಳಾದ ಅಭಿನವ್ ಆಚಾರ್ ಕೆ. ಮತ್ತು ಶ್ರೀಜಿತ್ ಸಿ. ಎಚ್. ತಂಡ, ಹರ್ಷ ಕೆ ಮತ್ತು ಪ್ರೀತಮ್ ಎಂ. ತಂಡ ಹೀಗೆ ಒಟ್ಟು 7 ವಿಜ್ಞಾನ ಪ್ರಾಜೆಕ್ಟ್ ಗಳು ಆಯ್ಕೆಗೊಂಡಿವೆ.
ಆಯ್ಕೆಗೊಂಡ ವಿದ್ಯಾರ್ಥಿಗಳು ನ.25 ರಂದು ಮೂಡಬಿದ್ರೆಯಲ್ಲಿ ನಡೆಯಲಿರುವ ಇನ್‍ಸೆಫ್ ರೀಜನಲ್ ಸೈನ್ಸ್ ಫೇರ್ ನಲ್ಲಿ ಭಾಗವಹಿಸಲಿದ್ದಾರೆ ಎಂದು ಶಾಲಾ ಮುಖ್ಯ ಶಿಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.