ಪುತ್ತೂರು: ನೆಹರುನಗರದಲ್ಲಿ ಕಲ್ಲೇಗ ಟೈಗರ್ ತಂಡದ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ಚೇತನ್, ಮನೀಶ್, ಕೇಶವ, ಮಂಜುನಾಥ್ ಎಂಬವರನ್ನು ಬುಧವಾರ ನ್ಯಯಾಲಯಕ್ಕೆ ಹಾಜರುಪಡಿಸಲಾಯಿತು.
ಮಂಗಳವಾರ ರಾತ್ರಿ ಆರೋಪಿಗಳನ್ನು ನ್ಯಾಯಾಧೀಶರ ಮನೆಗೆ ಹಾಜರು ಪಡಿಸಲಾಗಿತ್ತು. ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ನ್ಯಾಯಾಧೀಶರು ನ.22ರ ತನಕ ನ್ಯಾಯಾಂಗ ಕಸ್ಟಡಿಗೊಳಪಡಿಸಿ ಆದೇಶ ನೀಡಿದ್ದಾರೆ.
ಸೋಮವಾರ ತಡರಾತ್ರಿ ಅಕ್ಷಯ್ ಕಲ್ಲೇಗ ಅವರನ್ನು ನಾಲ್ವರ ತಂಡ ತಲವಾರಿನಿಂದ ಹತ್ಯೆ ಮಾಡಿತ್ತು. ಅದಾದ ಬಳಿಕ ಆರೋಪಿಗಳು ಪೊಲೀಸರಿಗೆ ಶರಣಾಗಿದ್ದರು.