ಗಂಡಿಬಾಗಿಲು ಶಾಲಾ ಮುಖ್ಯ ಶಿಕ್ಷಕ ಜನಾರ್ದನ ಗೌಡ ನಿಧನ

ರಾಮಕುಂಜ: ಕೊಯಿಲ ಗ್ರಾಮದ ಗಂಡಿಬಾಗಿಲು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ, ಅಲಂಕಾರು ಗ್ರಾಮದ ತೀರ್ಥಜಾಲು ನಿವಾಸಿ ಜನಾರ್ದನ ಗೌಡ (59) ಮಂಗಳವಾರ ತಡರಾತ್ರಿ ಹೃದಯಾಘಾತದಿಂದ ನಿಧನರಾದರು.

ಜನಾರ್ದನ ಗೌಡ ಅವರು ಮಂಗಳವಾರ ಮಧ್ಯಾಹ್ನದ ವರೆಗೆ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ ಬಳಿಕ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಹೋಗಿ ಸಂಜೆ ಮನೆಗೆ ಬಂದಿದ್ದರು. ರಾತ್ರಿ ಅವರಿಗೆ ಎದೆನೋವು ಹಾಗೂ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು ಮನೆಯವರು ತಕ್ಷಣ ಉಪ್ಪಿನಂಗಡಿಯ ಆಸ್ಪತ್ರೆಗೆ ಕರೆತಂದರಾದರು ಆ ವೇಳೆಗಾಗಲೇ ಜನಾರ್ದನಗೌಡರವರು ವೃತಪಟ್ಟಿದ್ದರು ಎನ್ನಲಾಗಿದೆ.

ಜನಾರ್ದನ ಗೌಡ ಅವರು ನರಿಮೊಗರು ಶಾಲೆಯಲ್ಲಿ ಶಿಕ್ಷಕ ವೃತ್ತಿ ಆರಂಭಿಸಿ ಬಳಿಕ ಕುಂಡಾಜೆ, ಕಳಪ್ಪಾರು, ಆಲಂಕಾರು ಶಾಲೆಗಳಲ್ಲಿ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸಿ ಎರಡು ವರ್ಷ ದ ಹಿಂದೆ ಮುಖ್ಯಶಿಕ್ಷಕರಾಗಿ ಭಡ್ತಿಪಡೆದು ಗಂಡಿಬಾಗಿಲು ಶಾಲೆಗೆ ವರ್ಗಾವಣೆಗೊಂಡು ಕರ್ತವ್ಯ ನಿರ್ವಹಿಸುತ್ತಿದ್ದರು.































 
 

ಮೃತರು ಪತ್ನಿ ನರೇಗಾ ಯೋಜನೆಯ ಗ್ರಾಮ ಸಂಪನ್ಮೂಲ ವ್ಯಕ್ತಿ ಜಯಮಣಿ, ಪುತ್ರಿ ಹರ್ಷಿತಾ ಹಾಗೂ ವಿದೇಶದಲ್ಲಿ ಉದ್ಯೋಗದಲ್ಲಿರುವ ಪುತ್ರ ಚರಣ್ ಕುಮಾರ್ ಅವರನ್ನು ಅಗಲಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top